ಈಕೆಗೆ 74 ವರ್ಷ ವಯಸ್ಸು ಅಂದ್ರೆ ನೀವು ನಂಬ್ತೀರಾ..?
ಐವತ್ತು ವರ್ಷ ಆಯ್ತು ಅಂದ್ರೆ ಮುದುಕರ ಹಾಗೆ ಆಗ್ಬಿಟ್ಟಿರುತ್ತಾರೆ.. ಮುಖವೆಲ್ಲಾ ಸುಕ್ಕುಗಟ್ಟೋಕೆ ಶುರುವಾಗಿರುತ್ತೆ.. ಆದ್ರೆ ಇಲ್ಲೊಬ್ಬ ಮಾಡೆಲ್ ಇದ್ದಾಳೆ.. ಆಕೆಗೆ ಈಗ 74 ವರ್ಷ ವಯಸ್ಸು.. ಆದರೂ ಈಕೆ ಈಗಲೂ 20ರ ಯುವತಿಯಂತೆ ಕಾಣುತ್ತೆ.. ನೋಡೋಕೂ ಆದೇ ರೀತಿ ಇದ್ದಾಳೆ, ಆಕೆಯ ಉತ್ಸಾಹ ಕೂಡಾ ಅದೇ ರೀತಿ ಇದೆ..
ಈಕೆಯ ಹೆಸರು ವೆರಾ ವಾಂಗ್.. ಫ್ಯಾಷನ್ ಡಿಸೈನರ್.. ಜೊತೆಗೆ ಮಾಡೆಲ್ ಕೂಡಾ ಹೌದು… ಇಳಿ ವಯಸ್ಸಿನಲ್ಲೂ ಈಕೆ ಗ್ಲಾಮರ್ ಉಳಿಸಿಕೊಂಡಿರುವುದು, ಈ ವಯಸ್ಸಿನಲ್ಲೂ ಮಾಡೆಲ್ ಆಗಿರುವ ಕಾರಣದಿಂದಾಗಿ ಈ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾಳೆ.. 1990 ರಲ್ಲಿ ತನ್ನ ಮಾಡೆಲಿಂಗ್ ಕ್ಷೇತ್ರಕ್ಕಿಳಿದ ವೆರಾ ವಾಂಗ್ 74 ನೇ ವಯಸ್ಸಾದರೂ ಚಿರ ಯುವತಿಯಂತೆ ಇದ್ದಾಳೆ.. ಈಕೆಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ ಎಂದರೆ ಅಚ್ಚರಿಪಡಬೇಕಾಗಿಲ್ಲ..
ವೆರಾ ವಾಂಗ್ ಫೋಟೋ ನೋಡಿದರೆ ಹದಿಹರೆಯದ ಯುವತಿ ಎಂದು ಎಲ್ಲರೂ ಭಾವಿಸುತ್ತಾರೆ.. ಯಾಕಂದ್ರೆ ಅಷ್ಟೊಂದು ಸ್ಲಿಮ್ ಅಂಡ್ ಬ್ಯೂಟಿಯಾಗಿದ್ದಾರೆ ಈಕೆ.. ಇತ್ತೀಚಿಗೆ ವೆರಾವಾಂಗ್ ಸ್ವಿಮ್ ಸೂಟ್‌ನಲ್ಲಿ ಹಂಚಿಕೊಂಡ ಫೋಟೋಗಳು ಹೆಚ್ಚು ವೈರಲ್ ಆಗಿವೆ.. 74 ವಯಸ್ಸಿನಲ್ಲೂ ಅತ್ಯಂತ ಆರೋಗ್ಯವಾಗಿ ಓಡಾಡಿಕೊಂಡಿರುವ ವೆರಾವಾಂಗ್ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದಾಳೆ.. ಈಕೆಗೇನಾದರೂ ರಿವರ್ಸ್ ಏಜಿಂಗ್ ಆಗುತ್ತಿದ್ಯಾ ಎಂದು ಹಲವರು ಅನುಮಾನ ಸಹ ವ್ಯಕ್ತಪಡಿಸಿದ್ದಾರೆ.
ನಿಶ್ಚಿಂತೆಯಿಂದ ಜೀವಿಸಿವುದು, ನಮ್ಮ ಕೆಲಸವನ್ನು ನಾವು ಪ್ರೀತಿಸುವುದು, ನಮ್ಮ ದೇಹವನ್ನು ಕೂಡಾ ಅತ್ಯಂತ ಪ್ರೀತಿಯಿಂದ ಕಾಪಾಡುವುದು, ರಾತ್ರಿ ವೇಳೆ ಕಣ್ತುಂಬ ನಿದ್ದೆ ಮಾಡುವುದು ಹಾಗೂ ಸೂರ್ಯನ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಣೆ ಮಾಡಿಕೊಂಡು ಸದಾ ಯೌವ್ವನದಿಂದ ಇರಬಹುದು ಎಂದು ವಿರಾ ವಾಂಗ್ ಹೇಳುತ್ತಾಳೆ..