ದೇಶದಲ್ಲಿ 400ರ ಗಡಿ ದಾಟಿದ ಓಮಿಕ್ರಾನ್ ಪ್ರಕರಣ
ನವದೆಹಲಿ : ರೂಪಾಂತರಿ ತಳಿ ಓಮಿಕ್ರಾನ್ ಮೂರನೆ ಅಲೆಯ ಬೀತಿಯನ್ನು ಸೃಷ್ಠಿಸುತ್ತಿದೆ. ಭಾರದಲ್ಲಿ ಈಗ ೪೦೦ಕ್ಕೂ ಹೆಚ್ಚ ಓಮಿಕ್ರಾನ್ ಪ್ರಕರಣಗಳು ದಾಖಲಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಮೂರನೇ ಅಲೆ ಬರುವ ಮುನ್ಸೂಚನೆ ಸಿಕ್ಕಿದೆ.
415 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 115 ಮಂದಿ ಗುಣಮುಖರಾಗಿದ್ದಾರೆ. ಸಂಶೋಧನೆಯ ಪ್ರಕಾರ ಫೆಬ್ರುವರಿಗೆ ದೇಶದಲ್ಲಿ ಮೂರನೆ ಅಲೆ ಅಬ್ಬರಿಸಲಿದೆ ಎಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರಾದಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗಿದೆ (108). ದೆಹಲಿಯಲ್ಲಿ 79, ಗುಜರಾತ್‌ನಲ್ಲಿ 43, ತೆಲಂಗಾಣದಲ್ಲಿ 38, ಕೇರಳದಲ್ಲಿ 37, ತಮಿಳುನಾಡಿನಲ್ಲಿ 34 ಮತ್ತು ಕರ್ನಾಟಕದಲ್ಲಿ 31 ಓಮಿಕ್ರಾನ್ ಕೇಸ್‌ಗಳು ವರದಿಯಾಗಿದೆ.