International

UKRAINE-RUSSIA WAR: 450 ಕ್ಕೂ ರಷ್ಯಾ ಸೈನಿಕರ ಸಾವು; 18 ಉಕ್ರೇನ್‌ ಟ್ಯಾಂಕರ್‌ಗಳ ನಾಶ

ಕೀವ್: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್‌ ರಾಜಧಾನಿ ಮೇಲೂ ರಷ್ಯಾ ಸೈನಿಕರು ದಾಳಿ ನಡೆಸುತ್ತಿದ್ದಾರೆ. ಇತ್ತ ಉಕ್ರೇನ್‌ ಕೂಡಾ ಪ್ರತಿ ದಾಳಿ ನಡೆಸುತ್ತಿದೆ. ಇದುವರೆಗೆ ಉಕ್ರೇನ್‌ ನಡೆಸಿದ ಪ್ರತಿದಾಳಿಗೆ ರಷ್ಯಾದ 450 ಸೈನಿಕರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಇದರ ಜೊತೆಗೆ 18 ಉಕ್ರೇನಿಯನ್ ಟ್ಯಾಂಕ್‌ಗಳು ನಾಶವಾಗಿವೆ ಎಂದು ರಷ್ಯಾ ಹೇಳಿಕೊಳ್ಳುತ್ತಿದೆ. ರಷ್ಯಾದ ಇಬ್ಬರು ಪ್ಯಾರಾಟ್ರೂಪರ್‌ಗಳನ್ನು ಬಂಧಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. ರಷ್ಯಾದ ಎರಡು ಕ್ಷಿಪಣಿ ಮತ್ತು ಒಂದು ಯುದ್ಧ ವಿಮಾನವನ್ನು ಉಕ್ರೆನ್ ಹೊಡೆದುರುಳಿಸಿದೆ. ಈ ನಡುವೆ ಬ್ರಿಟನ್ ಈಗಾಗಲೇ ರಷ್ಯಾ ವಿರುದ್ಧ ಮಿತ್ರರಾಷ್ಟ್ರ ಅಮೆರಿಕ ಸಲಹೆಯಂತೆ ನಿರ್ಬಂಧವನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ತಮ್ಮ ದೇಶದೊಳಗೆ ಬರುವ ಎಲ್ಲಾ ಬ್ರಿಟಿಷ್ ವಿಮಾನಗಳಿಗೆ ರಷ್ಯಾ ನಿರ್ಬಂಧ ವಿಧಿಸಿದೆ.

Share Post