InternationalLifestyle

20 ಬಾಯ್‌ ಫ್ರೆಂಡ್ಸ್‌, 20 ಐಫೋನ್‌ಗಳು; ಐಫೋನ್‌ ಮಾರಿ ಮನೆ ಖರೀಸಿದ ಯುವತಿ!

ಬೀಜಿಂಗ್‌; ಚೀನಾದಲ್ಲಿ ಯುವತಿಯೊಬ್ಬಳು ಮನೆ ಕೊಳ್ಳಬೇಕಾಗಿತ್ತು.. ಆದ್ರೆ ಆಕೆಯ ಬಳಿ ಹಣ ಇರಲಿಲ್ಲ.. ಹೀಗಾಗಿ ಆಕೆ ಒಬ್ಬರಾದ ಮೇಲೆ ಒಬ್ಬರು ಎಂಬಂತೆ 20 ಹುಡುಗರನ್ನು ಲವ್‌ ಮಾಡಿದ್ದಾಳೆ.. ಪ್ರತಿ ಹುಡುಗನಿಂದ ಒಂದೊಂದು ಐಫೋನ್‌ ಗಿಫ್ಟ್‌ ಪಡೆದಿದ್ದಾಳೆ.. ಎಲ್ಲಾ 20 ಐಫೋನ್‌ಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಮನೆ ಖರೀದಿ ಮಾಡಿದ್ದಾರೆ..
ಚೀನಾದ Xiaoli ಎಂಬಾಕೆಯೇ ಈ ಕೆಲಸ ಮಾಡಿದ ಯುವತಿಯಾಗಿದ್ದಾಳೆ.. ಈಕೆ ಬಡವಳಾಗಿದ್ದು, ಸ್ವಂತ ಮನೆ ಇರಲಿಲ್ಲ. ಈ ಕಾರಣಕ್ಕಾಗಿ ಆಕೆ ಬಾಯ್‌ಫ್ರೆಂಡ್‌ ಮಾಡಿಕೊಂಡು, ಗಿಫ್ಟ್‌ ಆಗಿ ಐಫೋನ್‌ ಪಡೆದುಕೊಳ್ಳುತ್ತಿದ್ದಳು.. ನಂತರ ಆತನಿಗೆ ಬ್ರೇಕ್‌ ಅಪ್‌ ಹೇಳಿ ಇನ್ನೊಬ್ಬನನ್ನು ಲವ್‌ ಮಾಡುತ್ತಿದ್ದಳು.. ಹೀಗೆ 20 ಯುವಕರನ್ನು ಪ್ರೀತಿಸಿ, 20 ಐಫೋನ್‌ ಪಡೆದಿದ್ದಳು. ನಂತರ ಎಲ್ಲಾ ಫೋನ್‌ಗಳನ್ನು ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ.. ಅದರಿಂದ ಬಂದ ಹಣವನ್ನು ಡೌನ್‌ ಪೇಮೆಂಟ್‌ ಮಾಡಿ ಫ್ಲ್ಯಾಟ್‌ ಖರೀದಿ ಮಾಡಿದ್ದಾಳೆ.. ಇದು 2016ರಲ್ಲಿ ನಡೆದ ಘಟನೆಯಾಗಿದೆ.. ಆದ್ರೆ ಇದೀಗ ಯಾರೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುತ್ತಿದ್ದಾರೆ..

Share Post