DistrictsHealth

ಕೆಲಸಕ್ಕೆ ರೆಡಿಯಾಗುತ್ತಿರುವಾಗಲೇ ಜವರಾಯ ಎಂಟ್ರಿ; ಹೃದಯಘಾತಕ್ಕೆ ಬಲಿಯಾದ ಯುವತಿ!

ಕೊಡಗು; ಕೆಲಸಕ್ಕೆ ಹೋಗಲು ರೆಡಿಯಾಗುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದುಬಿದ್ದು ಸುಂದರ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ..  ಮಡಿಕೇರಿ ತಾಲ್ಲೂಕಿನ ನೆಲಜಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ..  24 ವರ್ಷದ ನಿಲಿಕಾ ಪೊನ್ನಪ್ಪ ಎಂಬಾಕೆಯೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾಳೆ..

ನೆಲಜಿ ಗ್ರಾಮದ ಮಣವಟ್ಟಿರ ಪೊನ್ನಪ್ಪ ಅವರ ಮಗಳಾದ ನಿಲಿಕಾ, ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು.. ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಲು ರೆಡಿಯಾಗುತ್ತಿದ್ದಳು.. ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾಳೆ.. ತಾಯಿ ಬಂದು ಏನಾಯಿತು ಎಂದು ಕೇಳುವಷ್ಟರಲ್ಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು..

ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.. ಪರೀಕ್ಷೆ ಮಾಡಿದ ವೈದ್ಯರು, ಆಗ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಹೇಳಿದ್ದಾರೆ.. ಇದರಿಂದಾಗಿ ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ..

Share Post