CrimeDistricts

ಮಳೆಯಿಂದಾಗಿ ಮತ್ತೊಂದು ದುರಂತ; ವಿದ್ಯುತ್‌ ಸ್ಪರ್ಶಿಸಿ ಇಬ್ಬರು ಆಟೋ ಚಾಲಕರ ಸಾವು!

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಅವಾಂತರಗಳು ನಡೆಯುತ್ತಲೇ ಇವೆ.. ಇತ್ತೀಚೆಗಷ್ಟೇ ಉಲ್ಲಾಳ ಬಳಿ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು.. ಇದೀಗ ವಿದ್ಯುತ್‌ ತಂತಿ ತಗುಲು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ.. 

ಮಂಗಳೂರಿನ ರೊಸಾರಿಯೋ ಶಾಲೆ ಬಳಿ ಬೆಳಗ್ಗೆ ಒಬ್ಬ ಆಟೋ ಚಾಲಕ ಆಟೋ ಸ್ವಚ್ಛ ಮಾಡುತ್ತಿದ್ದ. ಈ ವೇಳೆ ಆತನಿಗೆ ವಿದ್ಯುತ್‌ ತಗುಲಿದೆ.. ಇದನ್ನು ನೋಡಿದ ಮತ್ತೊಬ್ಬ ಚಾಲಕನ ವಿದ್ಯುತ್‌ ಎಂದು ತಿಳಿಯದೇ ರಕ್ಷಣೆಗೆ ಧಾವಿಸಿದ್ದಾನೆ.. ಹೀಗಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ದೇವರಾಜು ಹಾಗೂ ರಾಜು ಎಂಬುವವರೇ ಸಾವನ್ನಪ್ಪಿದ ಆಟೋ ಚಾಲಕರಾಗಿದ್ದಾರೆ..

ಭಾರೀ ಮಳೆ, ಗಾಳಿಗೆ ವಿದ್ಯುತ್‌ ತಂತಿ ಕೆಳಗೆ ಬಿದ್ದಿದ್ದು, ಅದನ್ನು ಆಟೋ ಚಾಲಕರು ನೋಡಿಕೊಂಡಿಲ್ಲ.. ಅದನ್ನು ಸ್ಪರ್ಶ ಮಾಡಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.. ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ..

 

Share Post