DistrictsHealth

ವಿಷವಾಯಿತೇ ಮಟನ್‌ ಊಟ..?; ಊಟ ಮಾಡಿ ಮಲಗಿದ ಆ ನಾಲ್ವರು ಏಳಲೇ ಇಲ್ಲ!

ರಾಯಚೂರು; ಒಂದೇ ಕುಟುಂಬದ ಐದು ಮಂದಿ ಮನೆಯಲ್ಲಿ ಮಟನ್‌ ಊಟ ಮಾಡಿಕೊಂಡು ತಿಂದಿದ್ದರು.. ಅನಂತರವೂ ಅವರು ಚೆನ್ನಾಗಿಯೇ ಇದ್ದರು.. ರಾತ್ರಿ ಎಂದಿನಂತೆಯೇ ಮಲಗಿದ್ದರು.. ಆದ್ರೆ ಅದೇನಾಯ್ತೋ ಏನೋ ಐವರಲ್ಲಿ ನಾಲ್ವರು ಬೆಳಗ್ಗೆ ಎದ್ದೇಳಲ್ಲೇ ಇಲ್ಲ.. ಮಲಗಿದಲ್ಲಿಯೇ ಸಾವನ್ನಪ್ಪಿದ್ದಾರೆ.. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಇದನ್ನೂ ಓದಿ; ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಮುಂದಿನ ಸಿಎಂ ಯಾರು..?

ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರಂತ ನಡೆದುಹೋಗಿದೆ.. ಗ್ರಾಮದಲ್ಲಿ ಕುರಿಯೊಂದನ್ನು ಕುಯ್ದಿದ್ದು, ಮಟನ್‌ ತಂದು ಮನೆಯಲ್ಲಿ ಅಡುಗೆ ಮಾಡಿಕೊಂಡು ತಿಂದಿದ್ದರು.. ಅದು ತಿಂದ ಮೇಲೆ ಫುಡ್‌ ಪಾಯ್ಸನ್‌ ಆಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ..

ಇದನ್ನೂ ಓದಿ; ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ!

60 ವರ್ಷದ ಭೀಮಣ್ಣ, ಅವರ ಪತ್ನಿ 57 ವರ್ಷದ ಈರಮ್ಮ, ಅವರ ಮಕ್ಕಳಾದ 21 ವರ್ಷದ ಮಲ್ಲೇಶ್‌ ಹಾಗೂ 19 ವರ್ಷದ ಪಾರ್ವತಿ ಸಾವನ್ನಪ್ಪಿದವರು.. ಇನ್ನೊಬ್ಬರು ಜೀವಂತವಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ.. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

ಇದನ್ನೂ ಓದಿ; ರಾಜ್ಯಪಾಲರ ನೋಟಿಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಿ ನಿರ್ಣಯ!

Share Post