ಡೆಂಘಿ ಹಾವಳಿಗೆ ಜನ ತತ್ತರ!; ಹಾಸನವೊಂದರಲ್ಲಿ 4 ಬಾಲಕಿಯರು ಬಲಿ!
ಹಾಸನ; ರಾಜ್ಯದಲ್ಲಿ ಡೆಂಘೀ ಹಾವಳಿ ಹೆಚ್ಚಾಗುತ್ತಿದೆ.. ಅದ್ರಲ್ಲೂ ಕೂಡಾ ಪುಟ್ಟ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ.. ಹಾಸನ ಜಿಲ್ಲೆಯೊಂದರಲ್ಲೇ ನಾಲ್ವರು ಪುಟ್ಟ ಬಾಲಕಿಯರು ಡೆಂಘಿಗೆ ಬಲಿಯಾಗಿದ್ದಾರೆ.. ಕಳೆದ ಒಂದು ವಾರದಲ್ಲಿ ಹೊಳೆನರಸೀಪುರ ತಾಲ್ಲೂಕಿನಕಲ್ಲೇ ಮೂವರು ಬಾಲಕಿಯರು ಸಾವನ್ನಪ್ಪಿದ್ದಾರೆ..
ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಸಮೃದ್ಧಿ (8) ಎಂಬ ಬಾಲಕಿ ಡೆಂಘಿಗೆ ಬಲಿಯಾಗಿದ್ದಾಳೆ.. ಈಕೆಯನ್ನು ಮೂರು ದಿನ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಅನಂತರ ಮೈಸೂರಿನ ಅಪೋಲೊ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ..
ಇನ್ನು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಆರೋಗ್ಯಾಧಿಕಾರಿ ನಾಗೇಂದ್ರ ಎಂಬುವವರು ಈ ಡೆಂಘಿಗೆ ಬಲಿಯಾಗಿದ್ದಾರೆ.. ಇತ್ತ ಉತ್ತರ ಕನ್ನಡ ಜಿಲ್ಲೆ ಅಂಕೋಲದ ಬಾವಿಕೇರಿ ನಿವಾಸಿ ಹರೇರಾಮ್ ಗೋಪಾಲ್ ಭಟ್ ಎಂಬುವವರು ಕೂಡಾ ಡೆಂಘಿಗೆ ಬಲಿಯಾಗಿದ್ದಾರೆ..
ಜನವರಿಯಿಂದ ಜುಲೈ 3ರವರೆಗೆ ರಾಜ್ಯದಲ್ಲಿ 6,300ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.. ಸೊಳ್ಳೆಯಿಂದಾಗಿ ಈ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಜನರು ಸೊಳ್ಳೆಗಳ ನಿಯಂತ್ರಣದ ಕಡೆ ಗಮನ ಕೊಡಬೇಕಾಗಿದೆ..