ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ; ಸಚಿವ ಜಮೀರ್ ಸಂಧಾನ ಮಾಡಿದ ಮೇಲೂ ಕೊಲೆ ಮಾಡಿದ!
ಬೆಂಗಳೂರು; ಫೇಸ್‌ಬುಕ್ ನಲ್ಲಿ ಲೇವ್ ಬಂದು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ರೌಡಿಯೊಬ್ಬ ಹೇಳಿದಂತೆಯೇ ಮಾಡಿದ್ದಾನೆ.. ಸಚಿವ ಜಮೀರ್ ಅಹ್ಮದ್ ಸಂಧಾನ ನಡೆಸಿದ ಮೇಲೂ ಈ ಕೊಲೆ ನಡೆದಿದೆ.. ಬೆದರಿಕೆ ಹಾಕದ ಎಂಟು ತಿಂಗಳ ಬಳಿಕ ರೌಡಿಯೊಬ್ಬನ ಕೊಲೆ ನಡೆದಿದ್ದು, ಮತ್ತೊಬ್ಬ ರೌಡಿ ಹೇಳಿದಂತೆಯೇ ಮಾಡಿದ್ದಾನೆ..
ನಿನ್ನೆ ಬೆಂಗಳೂರಿನ ಜ್ಞಾನ ಭಾರತಿ ಠಾಣಾ ವ್ಯಾಪ್ತಿಯಲ್ಲಿ ರೌಡಿ ವೆಂಕಟೇಶ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.. ಇನ್ನು ಈ ಕೊಲೆ ನಂತರ ಎಂಟು ತಿಂಗಳ ಹಿಂದೆ ರೌಡಿಯೊಬ್ಬ ಫೇಸ್ ಬುಕ್ ಮಾಡಿದ್ದ ಲೈವ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ..
ಎಂಟು ತಿಂಗಳ ಹಿಂದೆ ಬೈಕ್ ರೈಡ್ ಮಾಡುತ್ತಲೇ ರೌಡಿ ನಾಗ ಎಂಬಾತ ಫೇಸ್‌ಬುಕ್ ಲೈವ್ ಮಾಡಿದ್ದ.. ಬದುಕಬೇಕು ಅಂದ್ರೆ ಬಂದು ಕ್ಷಮೆ ಕೇಳು.. ಇಲ್ಲವಾದರೆ ನಿನ್ನ ಕೊಲೆ ಮಾಡುತ್ತೇನೆ.. ಇದನ್ನು ಸೇವ್ ಮಾಡಿಟ್ಟುಕೋ ಶಿಷ್ಯ ಎಂದು ಲೈವ್‌ನಲ್ಲಿ ಹೇಳಿದ್ದ.. ಆತ ಬೆದರಿಕೆ ಹಾಕಿದ್ದದ್ದು ನಿನ್ನೆ ಕೊಲೆಯಾಗಿರುವ ರೌಡಿ ವೆಂಕಟೇಶ್‌ಗೆ.. ಇದಾದ ಎಂಟು ತಿಂಗಳಿಗೆ ಅಂದುಕೊಂಡಂತೆಯೇ ಮಾಡಿದ್ದಾನೆ..
ಅಂದಹಾಗೆ, ರೌಡಿ ನಾಗ ಫೇಸ್‌ಬುಕ್ ಲೈವ್ ಮಾಡಿದ ಮೇಲೆ ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಇಬ್ಬರನ್ನು ಕರೆಸಿ ಸಚಿವರು ಸಂಧಾನ ಮಾಡಿ ಕಳುಹಿಸಿದ್ದರು.. ಅದರ ಫೋಟೋ ಕೂಡಾ ಈಗ ಹರಿದಾಡುತ್ತಿದೆ.. ಇನ್ನೊಂದೆಡೆ ಗುರುವಾರ ರೌಡಿ ನಾಗ ಗ್ಯಾಂಗ್ ಕಟ್ಟಿಕೊಂಡು ಬಂದು ಅಟ್ಯಾಕ್ ಮಾಡಿ ವೆಂಕಟೇಶ್‌ನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ..