ಯಡಿಯೂರಪ್ಪ ಅವರು ಬೇಗ ಬಂದರೆ ಒಳ್ಳೆಯದು; ಪರಮೇಶ್ವರ್ ಹೀಗೆ ಅಂದಿದ್ದು ಯಾಕೆ..?
ಬೆಂಗಳೂರು; ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.. ಈ ಹಿನ್ನೆಲೆಯಲ್ಲಿ ಅವರಿಗೆ ಬಂಧನದ ಭೀತಿ ಶುರುವಾಗಿದೆ.. ಸಿಐಡಿ ಅಧಿಕಾರಿಗಳು ಯಡಿಯೂರಪ್ಪಗಾಗಿ ಹುಡುಕಾಟ ನಡೆಸುತ್ತಿದ್ದಾರೆ.. ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಮಾತನಾಡಿದ್ದಾರೆ.. ಅವರ ಆಡಿರುವ ಮಾತು ಕುತೂಹಲಕ್ಕೆ ಕಾರಣವಾಗಿದೆ..
ಬೆಂಗಳೂರಿನಲ್ಲಿ ಮಾತನಾಡಿರುವ ಪರಮೇಶ್ವರ್ ಅವರು, ಯಡಿಯೂರಪ್ಪ ಅವರು ಬೇಗ ಬಂದರೆ ಒಳ್ಳೆಯದು.. ಇಲ್ಲದಿದ್ರೆ ಅವರನ್ನು ಕರೆದುಕೊಂಡು ಬರುತ್ತಾರೆ ಹೇಳಿದ್ದಾರೆ.. ಪೊಲೀಸರು ಯಡಿಯೂರಪ್ಪ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ.. ಅನಂತರ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತಾರೆ.. ಅವರು ದೆಹಲಿಯಲ್ಲಿದ್ದಾರೆ ಎನ್ನುತ್ತಿದ್ದಾರೆ. ಸೋಮವಾರ ಬರೋದಾಗಿ ಹೇಳಿದ್ದಾರೆ ಎಂದೂ ಪರಮೇಶ್ವರ್ ಹೇಳಿದ್ದಾರೆ..
ಬಿಜೆಪಿ ನಾಯಕರು ಸೇಡಿನ ರಾಜಕಾರಣ ಎಂದು ಆರೋಪಿಸುತ್ತಾ ಇದ್ದಾರೆ.. ಆದ್ರೆ ಇದೆಲ್ಲಾ ಸುಳ್ಳು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ..