CrimeDistricts

ದೆವ್ವ ಬಿಡಿಸ್ತೀನಿ ಅಂತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಚಿತ್ರದುರ್ಗದಲ್ಲಿ ಮೌಲ್ವಿ ಅರೆಸ್ಟ್‌!

ಚಿತ್ರದುರ್ಗ; ನಿನ್ನ ದೇಹಕ್ಕೆ ದೆವ್ವ ಮೆಟ್ಟಿದ್ದು ಅದನ್ನು ಬಿಡಿಸ್ತೀನಿ ಅಂತ ಹೇಳಿ ಮೌಲ್ವಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಹಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.. ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಆರೋಪಿ ಮೌಲ್ವಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

ಅಪ್ರಾಪ್ತ ಬಾಲಕಿಯೊಬ್ಬಳು ಕಳೆದ ಮೂರು ವರ್ಷಗಳಿಂದ ಕುರಾನ್‌ ಪಠಣೆ ಮಾಡಲೆಂದು ಮಸೀದಿಗೆ ಹೋಗುತ್ತಿದ್ದಳು.. ಈ ವೇಳೆ ಆರೋಪಿ ಹಜರತ್ ಮೌಲ್ವಿ, ಈ ಬಾಲಕಿಗೆ ದೆವ್ವ ಮೆಟ್ಟಿದೆ ಎಂದು ಹೇಳಿದ್ದಾರೆ.. ಅದನ್ನು ಬಿಡಿಸಲು ಪೂಜೆ ಮಾಡಬೇಕು. ದೈಹಿಕ ಸುಖ ಕೊಟ್ಟರೆ ದೆವ್ವ ದೂರವಾಗುತ್ತೆ ಎಂದು ಬಾಲಕಿಗೆ ಹೇಳಿದ್ದ ಎಂದು ಆರೋಪಿಸಲಾಗಿದೆ.. ಹೀಗಾಗಿ ಬಾಲಕಿಯನ್ನು ನಂಬಿಸಿ ಹಲವು ವರ್ಷಗಳಿಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಲಾಗಿದೆ..

 

Share Post