ದಿನದಿಂದ ದಿನಕ್ಕೆ ಏರುತ್ತಿರುವ ಕೊರೊನಾ, ಓಮಿಕ್ರಾನ್: ಆತಂಕ ಸೃಷ್ಟಿ
ದೆಹಲಿ: ಈಗಾಗಲೇ ಕೊರೊನಾ ಮೂರನೇ ಅಲೆ ಪ್ರಾರಂಭವಾಗಿದ್ದು ಓಮಿಕ್ರಾನ್ ಎಂಬ ಹೊಸ ರೂಪಾಂತರಿ ವೈರಸ್ ಕೂಡ ಆಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರ ಈಗಾಗಲೇ ವ್ಯಾಕ್ಸಿನ್ ಅಭಿಯಾನ, ನೈಟ್ ಕರ್ಪ್ಯೂ, 50-50ನಿಯಮಾವಳಿಯನ್ನು ಕೂಡ ಜಾರಿಗೆ ತಂದಿದೆ. ಆದರೂ ಕೂಡ 24ಗಂಟೆಯಲ್ಲಿ 22,775 ಕೊರೊನಾ ಕೇಸ್‌ಗಳು ದಾಖಲಾಗಿವೆ. ಇದರಲ್ಲಿ 8,949 ಮಂದಿ ಚೇತರಿಸಿಕೊಂಡಿದ್ದು, 220 ಸೋಂಕಿತರು ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಿಸಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,04,781ಕ್ಕೆ ಏರಿದೆ. ಒಂದೇ ದಿನ 13,420 ಪ್ರಕರಣಗಳು ಹೆಚ್ಚಳವಾಗಿವೆ. ಕೋವಿಡ್ ಚೇತರಿಕೆ ಪ್ರಮಾಣ ಕೂಡ ಶೇಕಡಾ 98.32ರಷ್ಟಿದೆ.
ಇದರ ಜೊತೆಗೆ ಓಮಿಕ್ರಾನ್ 161 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಂಖ್ಯೆ 1,431ಕ್ಕೆ ಏರಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದ 454ಕ್ಕೆ ಏರಿದೆ. ದೆಹಲಿ-351, ಕೇರಳ-118 ಮತ್ತು ಗುಜರಾತ್‌ನಲ್ಲಿ 115 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈಗ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 3,48,61,579 ರಷ್ಟಾಗಿದ್ದು, ಮೃತರ ಸಂಖ್ಯೆ 4,81,080ಕ್ಕೆ ಏರಿಕೆಯಾಗಿದೆ.