ವೈಷ್ಣೋ ದೇವಿ ಪ್ರಕರಣ : ಮೃತರ ಕುಟುಂಬಕ್ಕೆ ತಲಾ 12ಲಕ್ಷ ಪರಿಹಾರ
ಶ್ರೀನಗರ : ಜಮ್ಮು ಕಾಶ್ಮೀರದ ಕತ್ರಾದಲ್ಲಿ ವೈಷ್ಣೋ ದೇವಿ ದರ್ಶನ ಪಡೆಯಲು ಬಂದವರಲ್ಲಿ ೧೨ ಮಂದಿ ಕಾಲ್ತುಳಿತಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದಾರೆ. ಹೊಸ ವರ್ಷದ ಪ್ರಯುಕ್ರ ನೂಕು ನುಗ್ಗಲು ಜಾಸ್ತಿ ಇದ್ದ ಕಾರಣ ಈ ಅವಘಡ ಸಂಭವಿಸಿದೆ. ೧೨ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ೧೩ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇದರ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮೃತರ ಕುಟುಂಬಕ್ಕೆ ೧೦ಲಕ್ಷ ಮತ್ತು ಗಾಯಾಳುಗಳಿಗೆ ೨ಲಕ್ಷ ಪರಿಹಾರ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಕೂಡ ಸತ್ತವರ ಕುಟುಂಬಕ್ಕೆ ೨ಲಕ್ಷ ಮತ್ತು ಗಾಯಾಳುಗಳಿಗೆ ೫೦ಸಾವಿರ ಪರಿಹಾರ ಘೋಷಿಸಿದ್ದಾರೆ.
ವೈಷ್ಣೋ ದೇವಿ ದುರಂತಕ್ಕೆ ಪ್ರಧಾನಿ ಅವರು ಕಂಬನಿ ಮಿಡಿದಿದ್ದಾರೆ.
Ex-gratia of Rs.10 lakh each would be given to the next of kin of those who lost their lives due to stampede and Rs.2 lakh to injured. Shrine board to bear the cost of treatment of injured.
— Office of LG J&K (@OfficeOfLGJandK) January 1, 2022
Extremely saddened by the loss of lives due to a stampede at Mata Vaishno Devi Bhawan. Condolences to the bereaved families. May the injured recover soon. Spoke to JK LG Shri @manojsinha_ Ji, Ministers Shri @DrJitendraSingh Ji, @nityanandraibjp Ji and took stock of the situation.
— Narendra Modi (@narendramodi) January 1, 2022