HealthInternational

ಸೂಡಾನ್‌ನಲ್ಲಿ ವಿಚಿತ್ರ ಕಾಯಿಲೆಗೆ 100ಮಂದಿ ಬಲಿ

ಸೂಡಾನ್:‌ ೬೦ ವರ್ಷಗಳಲ್ಲಿ ಎಂದೂ ಕಂಡು ಕೇಳರಿಯದ ಕಾಯಿಲೆಯೊಂದು ಆಫ್ರಿಕಾದ ಸೂಡಾನ್‌ನಲ್ಲಿ ವಕ್ಕರಿಸಿದೆ. ಈ ಮಹಾಮಾರಿ ಕಾಯಿಲೆಗೆ ಸುಮಾರು ೧೦೦ ಮಂದಿ ಉಸಿರು ಚೆಲ್ಲಿದ್ದಾರೆ. ಕೊರೊನಾ ಬಂದಾಗಿನಿಂದ ದಿನಕ್ಕೊಂದರಂತೆ ವೈರಸ್‌ ಸೃಷ್ಟಿಯಾಗಿ ಮಾನವನ ಜೀವದ ಜೊತೆ ಚಲ್ಲಾಟವಾಡುತ್ತಿವೆ. ಈ ಮಾರಣಾಂತಿಕ ಕಾಯಿಲೆ ಬಗ್ಗೆ ಪರಿಶೀಲನೆ ನಡೆಸುವಂತೆ WHO ಒಂದು ಕಮಿಟಿಯನ್ನು ಕಳುಹಿಸಿದೆ. ಸೂಡಾನ್‌ನಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆಹಾರ ಸೂರಿಲ್ಲದೆ ಜನ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ. ಪ್ರವಾಹದ ಜೊತೆಜೊತೆಗೆ ಹಲವು ಮಾರಣಾಂತಿಕ ಕಾಯಿಲೆಗಳು ಕೂಡಾ ಸೂಡಾನ್‌ ಜನರನ್ನಯ ನರಳುವಂತೆ ಮಾಡ್ತಿವೆ ಎಂದು ಅಲ್ಲಿನ ಮುಖ್ಯಮಂತ್ರಿ ಕುಗ್ವಾಂಗ್‌ ತಿಳಿಸಿದ್ದಾರೆ. ಇಲ್ಲಿನ ಜನರ ಸಾವಿಗೆ ಕಾರಣ ತಿಳಿದುಕೊಳ್ಳುವಲ್ಲಿ ಡಾಕ್ಟರ್ಸ್‌ ಮತ್ತು ವಿಜ್ಞಾನಿಗಳು ಬ್ಯುಸಿಯಾಗಿದ್ದಾರೆ. ಈ ದುರಂತಕ್ಕೆ ವಾತಾವರಣ ಕಲುಷಿತವೇ ಕಾರಣವಾ..? ಅಥವಾ ಬೇರೆ ಏನಾದ್ರು ಕಾರಣವಾ ಎಂದು ಪರಿಶೋಧನೆ ಶುರುವಾಗಿವೆ.

Share Post