ಮನುಷ್ಯನಿಗೆ ಹಂದಿ ಹೃದಯ ಜೋಡಣೆ ಯಶಸ್ವಿ; ಅಮೆರಿಕ ವೈದ್ಯರ ಸಾಧನೆ
ನ್ಯೂಯಾರ್ಕ್; ಅಮೆರಿಕ ವೈದ್ಯರು ಹೊಸದೊಂದು ಸಾಧನೆ ಮಾಡಿದ್ದಾರೆ. ಸಾಯುವ ಹಂತದಲ್ಲಿದ್ದ 58 ವರ್ಷ ವ್ಯಕ್ತಿಗೆ ಹಂದಿ ಹೃದಯ ಅಳವಡಿಸಿ ಆತನನ್ನು ಬದುಕಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಆ ವ್ಯಕ್ತಿ ಸಾಕಷ್ಟು ಚೇತರಿಸಿಕೊಂಡಿದ್ದು, ಕಸಿ ಮಾಡಿದ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ.
ಲಾರೆನ್ಸ್ ಫೌಸೆಟ್ ಎಂಬ ವ್ಯಕ್ತಿಗೆ ಈ ಹಂದಿ ಹೃದಯ ಕಸಿ ಮಾಡಲಾಗಿದೆ. ಆತ ಈಗ ಚೇತರಿಸಿಕೊಂಡಿದ್ದು, ವ್ಹೀಲ್ ಚೇರ್ ಕುಳಿತು ಎಲ್ಲರ ಜೊತೆ ಹಾಸ್ಯ ಮಾಡಿಕೊಂಡು ಆರಾಮಾಗಿದ್ದಾರೆ. ಆದ್ರೆ ಇನ್ನೂ ಒಂದಷ್ಟು ದಿನಗಳ ಕಠಿಣವಾಗಿರಲಿವೆ. ಕೆಲ ದಿನಗಳ ಕಾಲ ಇದೇ ರೀತಿಯ ಸ್ಪಂದನೆ ಸಿಕ್ಕರೆ ರೋಗಿ ಆರಾಮಾಗಿ ಓಡಾಡಲಿದ್ದಾರೆ.
ಮನುಷ್ಯನಿಗೆ ಹಂದಿ ಹೃದಯ ಕಸಿ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಒಬ್ಬ ಮನುಷ್ಯನ ಹಂದಿ ಹೃದಯದ ಕಸಿ ಮಾಡಲಾಗಿತ್ತು. ಅದು ಕೂಡಾ ಯಶಸ್ವಿಯಾಗಿತ್ತು.