Health

2.82 ಲಕ್ಷ ಜನರಿಗೆ ಕೊರೊನಾ ಸೋಂಕು; 441 ಮಂದಿ ಕೊವಿಡ್‌ಗೆ ಬಲಿ..!

ನವದೆಹಲಿ: ಭಾರತದಲ್ಲಿ ಕೊವಿಡ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಸುಮಾರು 2,82,970 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಜೊತೆಗೆ ಒಂದು ದಿನದಲ್ಲಿ ದೇಶಾದ್ಯಂತ 441 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜೊತೆಗೆ 8961 ಮಂದಿಗೆ ಒಮಿಕ್ರಾನ್‌ ಸೋಂಕು ಇರುವುದು ದೃಢಪಟ್ಟಿದೆ.
    ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ 15.13ಕ್ಕೇರಿದೆ. ದೇಶದಲ್ಲಿ ಸದ್ಯ 18,31,000 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇದ್ರಲ್ಲಿ ಬಹುತೇಕರಿಗೆ ಸೌಮ್ಯ ಗುಣಲಕ್ಷಣಗಳಿವೆ. ಬಹುತೇಕ ಮನೆಯಲ್ಲೇ ಕ್ವಾರಂಟೀನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರಷ್ಟೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
Share Post