ಒಮಿಕ್ರಾನ್ ಬಗ್ಗೆ ಎಚ್ಚರಿಕೆ ನೀಡಿದ WHO
ಜಿನೀವಾ : ಕೊರೊನಾ ವೈರಸ್‌ನ ರೂಪಾಂತರಿ ತಳಿಯಾಗಿರುವ ಒಮಿಕ್ರಾನ್ ಈಗಾಗಲೇ 77 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಈ ವಿಚಾರದ ಬಗ್ಗೆ WHO ಎಚ್ಚರಿಕೆಯ ಗಂಟೆ ನೀಡಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಒಮಿಕ್ರಾನ್ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್, ʼಕೊರೊನಾ ವೈರಸ್‌ನ ರೂಪಾಂತರ ತಳಿ ಒಮಿಕ್ರಾನ್ ೭೭ ರಾಷ್ಟ್ರಗಳಲ್ಲಿ ವರದಿಯಾಗಿದೆ. ಬಹುಶಃ ಹಿಂದೆಂದೂ ಯಾವ ರೂಪಾಂತರ ತಳಿಯಲ್ಲೂ ಕಾಣದ ರೀತಿಯಲ್ಲಿ ಹೆಚ್ಚಿನ ರಾಷ್ಟ್ರಗಳಿಗೆ ಪತ್ತೆ ಹಚ್ಚಲಾಗದ ರೀತಿಯಲ್ಲಿ ಹರಡಿದೆʼ ಎಂದು ಹೇಳಿದ್ದಾರೆ.
ಒಮಿಕ್ರಾನ್ ಹರಡುವುದನ್ನು ನಿಯಂತ್ರಿಸಲು ಮತ್ತು ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ತ್ವರಿತವಾಗಿ ಕಾರ್ಯಪ್ರವೃತ್ತರಾಗಲು ರಾಷ್ಟ್ರಗಳಿಗೆ WHO ಸೂಚಿಸಿದೆ.