BengaluruHealth

18 ವರ್ಷದಿಂದ ತಲೆಯಲ್ಲಿದ್ದ ಗುಂಡು ಹೊರತೆಗೆದ ಬೆಂಗಳೂರು ವೈದ್ಯರು!

ಬೆಂಗಳೂರು; ಬೆಂಗಳೂರಿನ ವೈದ್ಯರು ಯಾರೂ ಮಾಡದ ಸಾಧನೆ ಮಾಡುತ್ತಾರೆ. ಹಲವಾರು ಬಾರಿ ಇದನ್ನು ಮಾಡಿ ತೋರಿಸಿದ್ದಾರೆ. ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ. 18 ವರ್ಷಗಳ ಹಿಂದೆ ಯುದ್ಧದ ಸಮಯದಲ್ಲಿ ಯಮೆನ್‌ ಮೂಲದ ವ್ಯಕ್ತಿಯೊಬ್ಬರ ತಲೆಗೆ ಬುಲೆಟ್‌ ಒಂದು ಹೊಕ್ಕಿತ್ತು. ಅದನ್ನು ಬೆಂಗಳೂರಿನ ಆರ್.ವಿ.ಆಸ್ಟರ್ ಆಸ್ಪತ್ರೆಯ ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

28 ವರ್ಷದ ವ್ಯಕ್ತಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವರು 12 ವರ್ಷದವರಿದ್ದಾಗ ತಲೆಗೆ ಬುಲೆಟ್‌ ಹೊಕ್ಕಿತ್ತು. ಅದು ಸ್ಕಲ್‌ ಬೋನ್‌ ಮೂಲಕ ಕಿವಿಯಲ್ಲಿ ಬಂದು ನಿಂತಿತ್ತು. ಅದನ್ನು 18 ವರ್ಷಗಳಿಂದ ತೆಗೆದಿರಲಿಲ್ಲ. ತೆಗೆದರೆ ಸಾಯುವ ಅಪಾಯವಿದ್ದುದರಿಂದ ಬುಲೆಟ್‌ನ್ನು ಅಲ್ಲೇ ಬಿಡಲಾಗಿತ್ತು.

ಇದರಿಂದಾಗಿ ಕಿವಿ ಸೋರುವಿಕೆ, ತಲೆನೋವು, ಕಿವಿನೋವು ಹೆಚ್ಚಾಗಿತ್ತು. ಹೀಗಾಗಿ ಸ್ನೇಹಿತರ ಸಹಾಯದಿಂದ ಬೆಂಗಳೂರಿಗೆ ಆಸ್ಪತ್ರೆ ಸಂಪರ್ಕಿಸಿದ್ದು, ಇಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ್ದಾರೆ.

ಈಗ ವ್ಯಕ್ತಿ ಸಂಪೂರ್ಣ ಗುಣಮುಖರಾಗಿ ಯಮೆನ್‌ಗೆ ತೆರಳಿದ್ದಾರೆ.

Share Post