ಐಪಿಎಸ್ ಅಧಿಕಾರಿ ಅಂಜನಿ ಕುಮಾರ್ ಅಮಾನತು ಹಿಂಪಡೆದ ಚುನಾವಣಾ ಆಯೋಗ
ಹೈದರಾಬಾದ್; ಚುನಾವಣಾ ಆಯೋಗವು ತೆಲಂಗಾಣದ ಐಪಿಎಸ್ ಅಧಿಕಾರಿ ಅಂಜನಿ ಕುಮಾರ್ ಮೇಲಿನ ಅಮಾನತು ಹಿಂಪಡೆದಿದೆ.
ಉದ್ದೇಶಪೂರ್ವಕವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದಿರುವ ಅಂಜನಿಕುಮಾರ್, ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದಾಗಿ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ. ಚುನಾವಣಾ ಆಯೋಗವು ಅವರ ಮನವಿಯನ್ನು ಪರಿಗಣಿಸಿ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿತು.
ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆ ಸಾಧಿಸುತ್ತಿರುವ ಸಮಯದಲ್ಲಿ ಅಂಜನಿ ಕುಮಾರ್ ಅವರು ಟಿಪಿಸಿಸಿ ಅಧ್ಯಕ್ಷ ಮತ್ತು ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾದರು. ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ ನಂತರ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಸಿಇಸಿ ಅಂಜನಿ ಕುಮಾರ್ ಅವರನ್ನು ಅಮಾನತುಗೊಳಿಸಿತ್ತು.