ಸಿಡಿಲು ಏಕೆ ಬಡಿಯುತ್ತದೆ..?; ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ..?
ಮಳೆಗಾಲದಲ್ಲಿ ಸಿಡಿಲಿನಿಂದಾಗುವ ದುರಂತಗಳಿಗೆ ಲೆಕ್ಕವೇ ಇಲ್ಲ. ಪ್ರತಿ ವರ್ಷ ದೇಶದಲ್ಲಿ ಸಿಡಿಲಿನಿಂದ ನೂರಾರು ಜನ ಸಾವನ್ನಪ್ಪುತ್ತಲೇ ಇರುತ್ತಾರೆ. ಪ್ರಾಣಿ-ಪಕ್ಷಿಗಳು ಕೂಡಾ ಸಿಡಿಲಿಗೆ ಬಲಿಯಾಗುತ್ತಿವೆ. ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಜೀವವನ್ನೂ ರಕ್ಷಿಸಿಕೊಳ್ಳಬಹುದು, ಜೊತೆಗೆ ಆಸ್ತಿ ಪಾಸ್ತಿಗೆ ಹಾನಿಯಾಗುವುದನ್ನೂ ತಪ್ಪಿಸಬಹುದು.
ಹಾಗಾದರೆ, ಸಿಡಿಲು ಅಂದರೆ ಏನು..? ಅವು ಹೇಗೆ ಬಡಿಯುತ್ತವೆ..? ಈ ಪ್ರಶ್ನೆಗಳಿಗೆ ಉತ್ತರ ಹುಡುಕೋಣ ಬನ್ನಿ.
ಸಿಡಿಲು ಹೇಗೆ ಹುಟ್ಟುತ್ತವೆ..?
ಉಷ್ಣತೆ ಅಧಿಕವಾಗಿರುವ ಸಮಯದಲ್ಲಿ ನೀರು ಆವಿಯಾಗಿ ಬದಲಾಗುತ್ತದೆ. ಅದು ಆಕಾಶ ಸೇರಿ ಸುಮಾರು ೨೫ ಸಾವಿರ ಅಡಿಗಳ ಎತ್ತರದಲ್ಲಿ ಮೋಡಗಳು ಸೃಷ್ಟಿಯಾಗುತ್ತವೆ.
ಆದರೆ, ಮೇಲಿನಿಂದ ಸೂರ್ಯನ ಕಿರಣಗಳು ಅಧಿಕವಾಗಿ ಬೀಳುವುದರಿಂದ ಕಡಿಮೆ ಭಾರ ಇರುವ ಧನಾತ್ಮಕ ಮೋಡಗಳು ಮೇಲಕ್ಕೆ ಹೋಗುತ್ತದೆ. ಅಧಿಕ ಭಾರವಿರುವ ಋಣಾತ್ಮಕ ಮೋಡಗಳು ( ಎಲೆಕ್ಟ್ರಾನ್‌ಗಳು ಹೆಚ್ಚಿರುವ) ಕೆಳಕ್ಕೆ ಬರುತ್ತವೆ. ಅಂದರೆ, ನಮಗೆ ಯಾವಾಗಲೂ ಕಾಣಿಸುವ ದಟ್ಟವಾದ ಕಪ್ಪಗಿನ ಮೋಡಗಳಲ್ಲಿ ಎಲೆಕ್ಟ್ರಾನ್‌ಗಳು ಹೆಚ್ಚಾಗಿರುತ್ತವೆ.
ವಿಜ್ಞಾನದ ಪ್ರಕಾರ, ಋಣಾತ್ಮಕ ಮೋಡಗಳಲ್ಲಿನ ಎಲೆಕ್ಟ್ರಾನ್‌ಗಳು ಸಮೀಪದಲ್ಲಿನ ಧನಾತ್ಮಕ ಮೋಡಗಳ ಮೇಲೆ ಆಕರ್ಷಿತವಾಗುತ್ತವೆ. ಆದರೆ, ಧನಾತ್ಮಕ ಮೋಡಗಳು ತುಂಬಾ ಎತ್ತರ ಹೋಗಿಬಿಟ್ಟಾಗ ಹತ್ತಿರದಲ್ಲಿ ಬೇರೆ ಯಾವ ವಸ್ತು ಇದ್ದರೂ ಕೂಡಾ ಅದರ ಕಡೆ ಎಲೆಕ್ಟ್ರಾನ್‌ಗಳು ಪ್ರಯಾಣ ಮಾಡುತ್ತವೆ. ಇಂತಕ ಪ್ರಕ್ರಿಯೆಯಲ್ಲಿ ಮೋಡಗಳಿಂದ ಎಲೆಕ್ಟ್ರಾನ್‌ಗಳು ಒಮ್ಮಿಂದೊಮ್ಮೆಲೆ ರಿಲೀಸ್ ಆಗಿ ಅದು ವಿದ್ಯುತ್ ಕಾಂತೀಯ ಕ್ಷೇತ್ರವಾಗಿ ಬದಲಾಗುತ್ತದೆ. ಅದು ಭೂಮಿ ಕಡೆಗೆ ಅತಿವೇಗದಲ್ಲಿ ಬಂದು ಬಡಿಯುತ್ತದೆ. ಅದನ್ನೇ ಸಿಡಿಲು ಬಡಿಯುವುದು ಎಂದು ಹೇಳುತ್ತಾರೆ. ಮೋಡಗಳಿಂದ ಎಲೆಕ್ಟ್ರಾನ್‌ಗಳು ಬಿಡುಗಡೆಯಾಗುವ ಸಮಯದಲ್ಲೇ ಗುಡುಗು, ಮಿಂಚು ಹುಟ್ಟಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.
ಭೂಮಿ ಮೇಲೇ ಹೆಚ್ಚು..!
ಹಾಗೆ, ಮೋಡಗಳಿಂದ ಬೀಳುವ ಸಿಡಿಲಿನಲ್ಲಿ ಸರಿಸುಮಾರು ೩೦ ಕೋಟಿ ವೋಲ್ಟ್‌ಗಳಷ್ಟು ವಿದ್ಯುತ್ ಇರುತ್ತದೆ. ಅದು ಒಬ್ಬ ಮನುಷ್ಯನನ್ನು ಇದ್ದಲ್ಲೇ ಸುಟ್ಟು ಬೂದಿ ಮಾಡಿಬಿಡುತ್ತದೆ.
ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ಸಮುದ್ರ ತೀರದಲ್ಲಿ ಅಧಿಕ ಉಷ್ಣತೆ ಇರುತ್ತದೆ. ಹೀಗಾಗಿ ಅಂತ ಪ್ರದೇಶಗಳಲ್ಲಿ ಸಿಡಿಲು ಹೆಚ್ಚಾಗಿ ಬೀಳುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸಮುದ್ರಕ್ಕಿಂತ ಭೂಮಿ ಮೇಲೆಯೇ ಹೆಚ್ಚಾಗಿ ಸಿಡಿಲು ಬಡಿಯುವ ಅವಕಾಶಗಳಿರುತ್ತವೆ. ತಜ್ಞರು ಸಿಡಿಲು ಬಡಿಯುವ ಸಾಧ್ಯತೆಯನ್ನು ಮೊದಲೇ ಗುರುತಿಸಿ, ಜನರಿಗೆ ಎಚ್ಚರಿಕೆ ನೀಡಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅದಕ್ಕಾಗಿ ಆಂಧ್ರದ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಅಮೆರಿಕದ ಅರ್ಥ್ ವರ್ಕ್ ಹಾಗೂ ಇಸ್ರೋ ಸಹಕಾರ ತೆಗೆದುಕೊಳ್ಳುತ್ತಿದ್ದಾರೆ. ಅರ್ಥ್ ನೆಟ್ ವರ್ಕ್ ಮೂಲಕ ಆಂಧ್ರಪ್ರದೇಶದಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ.
ಎಲ್ಲಿ, ಯಾವ ಸಮಯದಲ್ಲಿ ಸಿಡಿಲು ಬಡಿಯುವ ಅವಕಾಶವಿರುತ್ತದೋ ಅದನ್ನು ತಜ್ಞರು ಈ ಸೆನ್ಸಾರ್‌ಗಳ ಮೂಲಕ ಅಂದಾಜು ಮಾಡುತ್ತಾರೆ. ಆ ಮೂಲಕ ಆ ಪ್ರದೇಶದ ಜನಕ್ಕೆ ಫೋನ್ ಕರೆ ಮಾಡಿ, ಮೆಸೇಜ್‌ಗಳನ್ನು ಕಳುಹಿಸಿ ಎಚ್ಚರಿಕೆ ನೀಡುತ್ತಾರೆ. ಇದರ ಮೂಲಕ ೩೦ ರಿಂದ ೪೦ ನಿಮಿಷಗಳ ಮೊದಲೇ ಸಿಡಿಲು ಬಡಿಯುವ ಸಾಧ್ಯತೆ ಇರುವ ಪ್ರದೇಶವನ್ನು ಗುರುತಿಸಬಹುದು ಎಂದು ತಜ್ಞರೊಬ್ಬರು ಹೇಳಿದ್ದಾರೆ.
ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ..?
ಗುಡುಗು, ಮಿಂಚು ಬರುತ್ತಿರುವಾಗ ಮನೆಯಲ್ಲಿದ್ದರೆ ಆಚೆಗೆ ಬರದಿರುವುದೇ ಒಳ್ಳೆಯದು. ಕಾರಿನಲ್ಲಿ ಕುಳಿತಿದ್ದರೆ, ಅದರಲ್ಲೇ ಕೂತಿರುವುದು ಉತ್ತಮ. ಹೊಲಗಳಲ್ಲಿ ಕೆಲಸ ಮಾಡುವ ರೈತರು ಮನೆಗಳಿಗೆ ಅಥವಾ ಸುರಕ್ಷಿತ ಪ್ರಾಂತ್ಯಗಳಿಗೆ ಸೇರಿಕೊಳ್ಳಬೇಕು. ಮರಗಳ ಕೆಳಗೆ ಟವರ್‌ಗಳ ಕೆಳಗೆ ಹೋಗಬಾರದು. ಸೆಲ್‌ಫೋನ್, ಎಫ್‌ಎಂನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಒಂದು ವೇಳೆ ಸುರಕ್ಷಿತ ಪ್ರದೇಶ ಸಿಗದಿದ್ದಾಗಲೂ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.
ಮೊಣಕಾಲಿನ ಮೇಲೆ ಕೈಗಳು, ತಲೆಯನ್ನಿಟ್ಟು ಮಡಚಿದ ರೀತಿಯಲ್ಲಿ ಕೂತುಕೊಳ್ಳಬೇಕು. ಇದರಿಂದಾಗಿ ಸಿಡಿಲು ಬಡಿದಾಗ ಅದರಿಂದ ಹೊರಬರುವ ವಿದ್ಯುತ್ ಪ್ರಭಾವ ನಮ್ಮ ಕಡಿಮೆ ಕಡಿಮೆ ಆಗುವ ಸಂಭವ ಹೆಚ್ಚಿರುತ್ತದೆ. ಭೂಮಿ ಮೇಲೆ ಪಾದಗಳನ್ನು ಪೂರ್ತಿಯಾಗಿ ಇಡುವುದರ ಬದಲಾಗಿ ಬೆರಳುಗಳ ಮೇಲೇ ಕೂತುಕೊಳ್ಳಬೇಕು. ಒಂದು ವೇಳೆ ನೀರಿನಲ್ಲಿದ್ದ ಸಾಧ್ಯವಾದಷ್ಟು ಬೇಗ ಹೊರಗೆ ಬರುವುದು ಒಳ್ಳೆಯದು. ಮನೆಯಲ್ಲಿ ಟಿವಿಗಳನ್ನು, ಫ್ರಿಡ್ಜ್‌ಗಳನ್ನು ನಿಲ್ಲಿಸಿಬಿಡಬೇಕು. ಇಲ್ಲದಿದ್ದರೆ ಸಿಡಿಲು ಬಿದ್ದಾಗ ವಿದ್ಯುತ್ ವೈರ್‌ಗಳ ಮೂಲಕ ಹೈವೋಲ್ಟೇಜ್ ಪ್ರವಹಿಸಿ, ಟಿವಿ, ಫ್ರಿಡ್ಜ್‌ಗಳು ಸುಟ್ಟುಹೋಗುತ್ತವೆ. ಇನ್ನು ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಕಂಬಗಳಿಂದ ಕೂಡಾ ನಾನು ದೂರ ಇದ್ದರೆ ಒಳ್ಳೆಯದು.
ಗುಡುಗಿನೊಂದಿಗೆ ಕೂಡಿದ ಮಳೆ ಬರುವ ಮುನ್ಸೂಚನೆ ಸಿಕ್ಕರೆ ಯಾವುದೇ ಕೆಲಸ ಇರಲಿ ಅದನ್ನು ಮುಂದಕ್ಕೆ ಹಾಕಿಕೊಳ್ಳಬೇಕು. ಹೊರಗೆ ಸುತ್ತಾಡದೇ ಮನೆಯಲ್ಲೇ ಸೇಫಾಗಿರುವುದು ಒಳ್ಳೆಯದು. ಗುಡುಗು, ಮಿಂಚು ಬರುತ್ತಿರುವಾಗ ಸ್ನಾನ ಮಾಡುವುದು, ಪಾತ್ರೆ ತೊಳೆಯುವುದು ಮಾಡಬಾರದು. ಯಾಕಂದ್ರೆ, ಲೋಹದ ಪಾತ್ರೆಗಳು, ಪೈಪ್‌ಗಳ ಮೂಲಕ ಒಮ್ಮೊಂದೊಮ್ಮೆಲೆ ದೊಡ್ಡಮಟ್ಟದಲ್ಲಿ ವಿದ್ಯುತ್ ಪ್ರವಹಿಸುವ ಅವಕಾಶ ಇರುತ್ತದೆ.
ಸಿಡಿಲು ಬಡಿದಾಗ ಮುಖ್ಯವಾಗಿ ದೇಹದ ಎರಡು ಕಡೆ ಹೆಚ್ಚಾಗಿ ಗಾಯವಾಗುತ್ತದೆ. ಸಿಡಿಲಿನಿಂದ ಉಂಟಾದ ವಿದ್ಯುತ್ ಪ್ರವಹಿಸಿದ ಜಾಗ ಹಾಗೂ ವಿದ್ಯುತ್ ಹೊರಹೋಗುವ ಪಾದಗಳ ಬಳಿ ಹೆಚ್ಚು ಗಾಯಗಳಾಗುತ್ತವೆ. ಸಿಡಿಲು ಬಡಿದವರನ್ನು ಮುಟ್ಟಿದರೆ ಶಾಕ್ ಹೊಡೆಯುತ್ತದೆ ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ಅದರಲ್ಲಿ ಸತ್ಯ ಇಲ್ಲವೇ ಇಲ್ಲ. ಹೀಗಾಗಿ, ಸಿಡಿಲಿನಿಂದ ತೊಂದರೆಗೀಡಾದವರಿಗೆ ಯಾವುದೇ ಭಯವಿಲ್ಲದೆ ಪ್ರಥಮ ಚಿಕಿತ್ಸೆ ನೀಡಿದರೆ, ಅವರನ್ನು ಉಳಿಸಿಕೊಳ್ಳಬಹುದು.