ಮಲಗಿದಲ್ಲೇ ಮೃತಪಟ್ಟ 23 ವರ್ಷದ ಯುವತಿ; ಏನಾಗಿತ್ತು ಗೊತ್ತಾ..?
ಬಂಟ್ವಾಳ; ರಾತ್ರಿ ಊಟ ಮಾಡಿ ಮಲಗಿದ 23 ವರ್ಷದ ಯುವತಿ ಬೆಳಗ್ಗೆಯಾಗುವಷ್ಟರಲ್ಲಿ ಬೆಡ್ ಮೇಲೆಯೇ ಮೃತಪಟ್ಟಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಈ ಘಟನೆ ನಡೆದಿದ್ದು, ಹೃದಯಾಘಾತದಿಂದ ಈ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಬಂಟ್ವಾಳದ ಪುಳಿಮಜಲು ನಿವಾಸಿ ಮಿತ್ರ ಶೆಟ್ಟಿ ಎಂಬ ಯುವತಿಯೇ ಮಲಗಿದಲ್ಲಿಯೇ ಸಾವನ್ನಪ್ಪಿದವರು. ಮಿತ್ರಾ ಶೆಟ್ಟಿಯವರ ತಂದೆ ಹಾಗೂ ಅಣ್ಣ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ. ಹೀಗಾಗಿ ಮಿತ್ರಾ ಶೆಟ್ಟಿ ತನ್ನ ತಾಯಿಯ ಜೊತೆ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ಎಂದಿನಿಂದ ರಾತ್ರಿ ಎಲ್ಲರ ಜೊತೆ ಊಟ ಮುಗಿಸಿ ತಾಯಿ, ಮಗಳು ಒಟ್ಟಿಗೆ ಮಲಗಿದ್ದರು. ಆದ್ರೆ ಬೆಳಗ್ಗೆ ತಾಯಿ ಎದ್ದು ಮಗಳನ್ನು ಎಬ್ಬಿಸಿದಾಗ ಎದ್ದೇ ಇಲ್ಲ. ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ತೋರಿಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.