ಆಟವಾಡುತ್ತಿದ್ದಾಗ ಕುಸಿದುಬಿದ್ದ ಬಾಲಕ; ರಸ್ತೆಯಲ್ಲೇ CPR ಮಾಡಿ ಬದುಕಿಸಿದ ವೈದ್ಯೆ!
ವಿಜಯವಾಡ; ವೈದ್ಯೋನಾರಾಯಣೋ ಹರಿ ಅಂತಾರೆ.. ಅಂದರೆ ವೈದ್ಯರು ದೇವರಿಗೆ ಸಮಾನ ಅಂತ.. ಇದನ್ನು ಎಷ್ಟೋ ಬಾರಿ ಸಾಬೀತಾಗಿದೆ.. ಇದೇ ರೀತಿ ವೈದ್ಯೆಯೊಬ್ಬರು ರಸ್ತೆಯಲ್ಲೇ ಬಾಲಕನಿಗೆ ಸಿಪಿಆರ್ ಮಾಡುವ ಮೂಲಕ ಆತನನ್ನು ಬದುಕಿಸಿದ್ದಾರೆ.. ಇದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಎ..
ವಿಜಯವಾಡದ ಅಯ್ಯಪ್ಪನಗರದ ಆರು ವರ್ಷದ ಸಾಯಿ ಸಂಜೆ ವೇಳೆ ಆಟವಾಡುವಾಗ ವಿದ್ಯುತ್ ವೈರ್ ಸ್ಪರ್ಶಿಸಿ ಕುಸಿದುಬಿದ್ದಿದ್ದಾನೆ.. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳೀಯರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಡಾ ರವಳಿ ಏನಾಯಿತೆಂದು ಕೇಳಿದ್ದಾರೆ.. ಕೂಡಲೇ ಆಕೆ ರಸ್ತೆಯಲ್ಲೇ ಆತನಿಗೆ ಸಿಪಿಆರ್ ಮಾಡಿದ್ದಾರೆ.
ವೈದ್ಯೆ ರವಳಿ ರಸ್ತೆಯಲ್ಲೇ ಬಾಲಕನನ್ನು ಪರೀಕ್ಷಿಸಿ ರಸ್ತೆಯ ಮೇಲೆ ಮಲಗಿಸಲು ಹೇಳಿದ್ದಾರೆ.. ಅದರ ನಂತರ ಅವರು ಸಿಪಿಆರ್ ಮಾಡಲು ಪ್ರಾರಂಭಿಸಿದ್ದಾರೆ. ಒಂದೆಡೆ ಡಾ.ರವಳಿ ಬಾಲಕನ ಎದೆಯ ಮೇಲೆ ಕೈ ಒತ್ತಿ ಅಲ್ಲಿದ್ದ ಮತ್ತೊಬ್ಬನಿಗೆ ಬಾಯಿಯಿಂದ ಗಾಳಿ ಊದುವಂತೆ ಸೂಚಿಸಿದ್ದಾರೆ.. ಏಳು ನಿಮಿಷಕ್ಕೂ ಹೆಚ್ಚು ಕಾಲ ಇದನ್ನು ಮಾಡಿದ ನಂತರ, ಹುಡುಗನ ದೇಹ ಕದಲಲು ಆರಂಭಿಸಿದೆ..
ಕೂಡಲೇ ಬಾಲಕನನ್ನು ದ್ವಿಚಕ್ರ ವಾಹನದಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಹೋಗುವ ದಾರಿಯಲ್ಲಿ, ಹುಡುಗನಿಗೆ ಅವನ ತಲೆಯನ್ನು ಸ್ವಲ್ಪ ಕೆಳಗೆ ಇರಿಸಿ ಮತ್ತು ಸರಿಯಾಗಿ ಉಸಿರಾಡಲು ಅವನನ್ನು ಮಲಗಿಸಲು ಸಲಹೆ ನೀಡಲಾಯಿತು. ಆಸ್ಪತ್ರೆಗೆ ತೆರಳಿದ ಬಳಿಕ, ಚಿಕಿತ್ಸೆ ನೀಡಿದ ಬಳಿಕ ಬಾಲಕ ಸಂಪೂರ್ಣ ಚೇತರಿಸಿಕೊಂಡಿದ್ದಾನೆ. 24 ಗಂಟೆಗಳ ಕಾಲ ನಿಗಾದಲ್ಲಿಟ್ಟು ತಲೆಯ ಸಿಟಿ ಸ್ಕ್ಯಾನ್ ಮಾಡಲಾಗಿದೆ.. ಯಾವುದೇ ತೊಂದರೆ ಇಲ್ಲ ಎಂದು ತಿಳಿದು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.
ಈಗ ಹುಡುಗ ಸಂಪೂರ್ಣ ಆರೋಗ್ಯವಾಗಿದ್ದಾನೆ. ರಸ್ತೆಯಲ್ಲಿ ಮಲಗಿದ್ದ ಬಾಲಕನಿಗೆ ಸಿಪಿಆರ್ ಮಾಡುವ ವೇಳೆ ಡಾ.ರವಳಿ ತೆಗೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.