ಕಡಿಮೆ ಬಂಡವಾಳದ ಬ್ಯುಸಿನೆಸ್; ತಿಂಗಳಿಗೆ ಲಕ್ಷ ಲಕ್ಷ ದುಡಿಮೆ!
ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಡಿಗ್ರಿ ಮಾಡಿದರೂ ಯುವ ಸಮುದಾಯ ಮನೆಯಲ್ಲಿ ಖಾಲಿ ಕೂರುತ್ತಿದೆ.. ಕೆಲಸಕ್ಕಾಗಿ ಎಷ್ಟು ಹುಡುಕಿದರೂ ಸಿಗುತ್ತಿಲ್ಲ.. ಅಂತಹವರಿಗೆ ಈ ಮನೆಯಲ್ಲೇ ಇದ್ದು ಲಕ್ಷ ಲಕ್ಷ ಸಂಪಾದನೆ ಮಾಡುವ ಅವಕಾಶ ಇದು…. ಯಾವುದೇ ನಷ್ಟವಿಲ್ಲದೆ, ಕಡಿಮೆ ಬಂಡವಾಳದಲ್ಲಿ ಈ ಬ್ಯುಸಿನೆಸ್ ನಡೆಸಬಹುದು, ಅತಿ ಹೆಚ್ಚು ಸಂಪಾದನೆ ಮಾಡಬಹುದು…
ನಿಮ್ಮ ವಾಸ್ತವ್ಯದ ಸ್ಥಳದಿಂದ ನೀವು ಸುಲಭವಾಗಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಇದು ಯಶಸ್ವಿಯಾಗಿ ಮುನ್ನಡೆಸಬಹುದು.. ಇತ್ತೀಚಿನ ದಿನಗಳಲ್ಲಿ ಆಹಾರ ವ್ಯಾಪಾರವು ಹೆಚ್ಚು ಬೇಡಿಕೆಯಲ್ಲಿದೆ.. ಇತ್ತೀಚೆಗೆ ಹೆಚ್ಚಿನ ಜನ ಕೆಲಸದ ಒತ್ತಡದಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿಲ್ಲ.. ಬದಲಾಗಿ, ಜೊಮ್ಯಾಟೋ ಮುಂತಾದ ಫುಡ್ ಆಪ್ ಗಳ ಮೂಲಕ ಆಹಾರ ಆರ್ಡರ್ ಮಾಡಿಕೊಳ್ಳುತ್ತಾರೆ..
ಹೀಗಾಗಿ ಚಪಾತಿ, ಪರಾಠಾ ತಯಾರಿ ಮಾಡುವ ಫುಡ್ ಸೆಂಟರ್ ಹಾಕಿದರೆ ಹೆಚ್ಚು ಗ್ರಾಹಕರನ್ನು ಸೆಳೆಯಬಹುದು… ನಮಗಾಗುವ ಖರ್ಚು ತುಂಬಾ ಕಡಿಮೆ. ಗೋಧಿ ಹಿಟ್ಟಿನಿಂದ ಮಾಡಿದ ಪರಾಠಗಳು ಮತ್ತು ಅದರೊಂದಿಗೆ ಆಲೂಗಡ್ಡೆ, ಮೂಲಂಗಿ, ಪನೀರ್, ಚಿಕನ್ ಮತ್ತು ಮಟನ್ ಕರಿಗಳನ್ನು ತಯಾರಿಸಿದರೆ ಸಾಕು. ಜನನಿಬಿಡ ಸ್ಥಳದಲ್ಲಿರುವ ಈ ಪರಾಠಾ ಫುಡ್ ಸ್ಟಾಲ್ ಒಳ್ಳೆಯ ಬೇಡಿಕೆ ಪಡೆಯುತ್ತದೆ.
ಈ ಆಹಾರ ಮಳಿಗೆಗೆ ನಿಮಗೆ ಬೇಕಾಗಿರುವುದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಂಪರ್ಕ ಮತ್ತು ನಂತರ ನಿಮಗೆ ಪರೋಟಾ ತಯಾರಿಗೆ ಬೇಕಾದ ಪದಾರ್ಥಗಳು.. ಇವೆಲ್ಲವೂ ಸೇರಿ ನಿಮಗೆ ರೂ. 25 ಸಾವಿರದವರೆಗೆ ಖರ್ಚಾಗುತ್ತದೆ. ಮತ್ತು ಒಂದು ಪರಾಟಾ ಬೆಲೆ 20 ರೂಪಾಯಿ ಅಂಡುಕೊಂಡರೂ ದಿನಕ್ಕೆ 100 ಮಾರಿದರೆ ರೂ. 2 ಸಾವಿರ ಬರುತ್ತದೆ. ನಾನ್ ವೆಜ್ ಪರಾಠಗಳಾದರೆ ಹೆಚ್ಚುವರಿ ಹಣ ಬರುತ್ತದೆ. ನೀವು ಆಹಾರ ವಿತರಣಾ ಅಪ್ಲಿಕೇಶನ್‌ಗಳಾದ ಸ್ವಿಗ್ಗಿ ಮತ್ತು ಜೊಮಾಟೊ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದರೆ, ನಿಮ್ಮ ಮಾಸಿಕ ಆದಾಯವೂ ಹೆಚ್ಚಾಗುತ್ತದೆ. ಎಲ್ಲಾ ಖರ್ಚು ಹೋಗಿ ಸುಮಾರು ರೂ. 50 ಸಾವಿರದವರೆಗೆ ಗಳಿಕೆ ಸಾಧ್ಯ.