HealthNational

ಇಂದಿನಿಂದ ಉಚಿತ ಬೂಸ್ಟರ್‌ ಡೋಸ್‌; 18 ವರ್ಷ ಮೇಲ್ಪಟ್ಟವರಿಗೆಲ್ಲಾ ಲಸಿಕೆ

ನವದೆಹಲಿ; ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಇಂದಿನಿಂದ 75 ದಿನಗಳ ಕಾಲ ಉಚಿತ ಬೂಸ್ಟರ್‌ ಡೋಸ್‌ ಕೊವಿಡ್‌ ಲಸಿಕೆ ನೀಡಲಾಗುತ್ತಿದೆ. ದೇಶದ ಎಲ್ಲಾ ಭಾಗಗಳಲ್ಲೂ ಉಚಿತ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದ್ದು, 18 ವರ್ಷ ಮೇಲ್ಟಟ್ಟ ಈಗಾಗಲೇ ಎರಡು ಡೋಸ್‌ ಲಸಿಕೆ ಪಡೆದವರು ಇದನ್ನು ಉಚಿತವಾಗಿ ಪಡೆಯಬಹುದು.

    ಎರಡನೇ ಡೋಸ್‌ ಪಡೆದು 6 ತಿಂಗಳು ಪೂರ್ಣಗೊಳಿಸಿದವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆಯಬಹುದು. ಶಾಲೆ- ಕಾಲೇಜುಗಳು, ರೈಲು ನಿಲ್ದಾಣ, ಕೈಗಾರಿಕಾ ಸಂಸ್ಥೆಗಳು, ಅಂತಾರಾಜ್ಯ ಬಸ್ ನಿಲ್ದಾಣಗಳು, ಚಾರ್ ಧಾಮ್ ಯಾತ್ರೆ, ಅಮರನಾಥ ಯಾತ್ರೆ ಮತ್ತು ಕನ್ವರ್ ಯಾತ್ರೆ , ಪ್ರಮುಖ ಮೇಳಗಳು ಮತ್ತು ಸಭೆಗಳ ಮಾರ್ಗಗಳಲ್ಲಿ ವಿಶೇಷ ಲಸಿಕಾ ಶಿಬಿರಗಳನ್ನು ನಡೆಸುವಂತೆಯೂ ಶಿಫಾರಸು ಮಾಡಲಾಗಿದೆ.

ಮೂರನೇ ಡೋಸ್‌ ಪಡೆಯುವವರು ಈ ಹಿಂದೆ ಮೊದಲ ಎರಡು ಡೋಸ್‌ ಪಡೆಯುವ ವೇಳೆ ನೀಡಿದ್ದ ಮೊಬೈಲ್‌ ನಂಬರ್‌ ನೀಡಿ ಸ್ಥಳದಲ್ಲಿಯೇ ನೋಂದಣಿ ಮಾಡಿಸಿ ಮೂರನೇ ಡೋಸ್‌ ಪಡೆಯಬಹುದು. ನೋಂದಣಿ ಸಂದರ್ಭದಲ್ಲಿಯೇ ಮೊದಲೆರಡು ಡೋಸ್‌ ಯಾವ ಲಸಿಕೆ ನೀಡಲಾಗಿತ್ತು ಎಂಬ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಮೂರನೇ ಡೋಸ್‌ ಆಗಿ ಅದೇ ಲಸಿಕೆಯನ್ನು ನೀಡಲಾಗುತ್ತದೆ.

Share Post