CrimeDistricts

ಪ್ರಿಯಕರನಿಗಾಗಿ ಪತಿಯನ್ನೇ ಕೊಲೆ ಮಾಡಿದ್ದ ಲೇಡಿ ಅರೆಸ್ಟ್‌

ದಾವಣಗೆರೆ; ಪತಿಯನ್ನು ಕೊಲೆ ಮಾಡಿ ನಾಟಕವಾಡಿದ್ದ ಮಹಿಳೆಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ದಾವಣಗೆರೆಯ ಹಳೇ ಬಿಸಲೇರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪ್ರಿಯಕರನಿಗಾಗಿ ಮಹಿಳೆ ಗಂಡನನ್ನು ಕೊಲೆ ಮಾಡಿದ್ದಳು. ಆರೋಪಿ ಕಾವ್ಯಾ ಹಾಗೂ ಆಕೆಯ ಪ್ರಿಯಕರ ಬೀರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕಾವ್ಯಾಗೆ ಲಿಂಗರಾಜ್‌ ಎಂಬುವವರ ಜೊತೆ ಮದುವೆಯಾಗಿತ್ತು. ಆದ್ರೆ ಆಕೆಗೆ ಬೀರೇಶ್‌ ಎಂಬಾತ ಪರಿಚಯವಾಗಿದ್ದ. ಆತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇಬ್ಬರೂ ಮನೆ ಬಿಟ್ಟು ಹೋಗಿದ್ದರು ಕೂಡಾ. ಆದ್ರೆ ವಾಪಸ್‌ ಕರೆಸಿ ರಾಜಿ ಸಂಧಾನ ಮಾಡಿಸಲಾಗಿತ್ತು. ನಂತರ ಕಾವ್ಯಾ ಗಂಡನ ಜೊತೆಗೇ ಇದ್ದಳು. ಆದ್ರೆ, ಇದ್ದಕ್ಕಿದ್ದಂತೆ ಪತಿ ಲಿಂಗರಾಜ್‌ ಸಾವನ್ನಪ್ಪಿದ್ದಾರೆ. ಮನೆ ಕ್ಲೀನ್‌ ಮಾಡುವ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಕಾವ್ಯಾ ಕಥೆ ಕಟ್ಟಿದ್ದಳು. ಆದ್ರೆ ಅನುಮಾನದಿಂದ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾರೆ.

ಪ್ರಿಯಕರನ ಜೊತೆ ಸೇರಿ ತಲೆಗೆ ಕಬ್ಬಿಣದ ಆಯುಧದಿಂದ ಹೊಡೆದು ಲಿಂಗರಾಜ್‌ನನ್ನು ಕೊಲೆ ಮಾಡಲಾಗಿದೆ. ನಂತರ ಅದನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲಾಗಿತ್ತು. ಲಿಂಗರಾಜು ತಾಯಿ ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸಿ ನಿಜ ಬಾಯಿಬಿಡಿಸಿದ್ದಾರೆ. ಈಗ ಇಬ್ಬರೂ ಜೈಲು ಸೇರಿದ್ದಾರೆ.

Share Post