ಒಣ ಮೆಣಸಿನ ಕಾಯಿ ಖಾರ, ಯಾವತ್ತಾದ್ರೂ ತಿಂದಿದ್ದೀರಾ?
ಚಳಿಗಾಲ ಬಂದ್ರೆ ಸಾಕು ಪ್ರತಿಯೊಬ್ಬರ ಆರೋಗ್ಯ ಹಾಳಾಗುತ್ತದೆ. ಸಾಮಾನ್ಯವಾಗಿ ಚಳಿ, ಜ್ವರ ,ಶೀತ, ಕೆಮ್ಮು ಕಾಣಿಸಿಕೊಳ್ಳತ್ತದೆ. ಆಗಾ ಬಾಯಿ ರುಚಿಗೆ ಏವಾದ್ರೂ ತಿನ್ನಬೇಕು ಅನಿಸ್ಸುತ್ತೆ. ಹಾಗಾ ಸಿಂಪಲ್ ಆಗಿ ರೆಸಿಪಿ ಒಮ್ಮೆ ಮಾಡಿ ನೋಡಿ
ಬೇಕಾಗುವ ಸಾಮಾಗ್ರಿಗಳು
ಒಣ ಮೆಣಸಿನಕಾಯಿ- ೧೦೦ ಗ್ರಾಂ
ಜೀರಿಗೆ- ಸ್ವಲ್ಪ
ಬೆಳ್ಳುಳ್ಳಿ- ೨
ಬೆಲ್ಲ-೧
ಹುಣುಸೆ ಹಣ್ಣು
ಉಪ್ಪು- ರುಚಿಗೆ ತಕ್ಕಷ್ಟು
ಒಣ ಕೊಬ್ಬರಿ
ಮಾಡುವ ವಿಧಾನ
ಒಣ ಮೆಣಸಿನಕಾಯಿ ಮಾತ್ರ ಹುರಿದುಕೊಳ್ಳಬೇಕು. ಇನ್ನುಳಿದ ಜೀರಿಗೆ, ಬೆಳ್ಳುಳ್ಳಿ, ಬೆಲ್ಲ, ಹುಣುಸೆ ಹಣ್ಣು, ಉಪ್ಪು ಸೇರಿಸಿ ಸ್ವಲ್ಪ ನೀರನ್ನು ಹಾಕಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಒಲೆ ಮೇಲೆ ಬಣಲೇ ಇಟ್ಟುಕೊಳ್ಳಬೇಕು. ಅದು ಕಾದ ನಂತರ ಒಗ್ಗರಣೆ ಹಾಕಿದ ಮೇಲೆ ರುಬ್ಬಿದ ಚಟ್ನಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಬೇಯಿಸಬೇಕು. ಅದನ್ನು ೧೫ ದಿನಗಳವರೆಗೆ ಶೇಖರಿಸಿಟ್ಟುಕೊಳ್ಳಬೇಕು.