National

ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್‌ ಕರೆನ್ಸಿಗೆ ಅಸ್ತು, ಈ ವರ್ಷದಿಂದಲೇ ಬಿಡುಗಡೆ

ದೆಹಲಿ: 2022-23ರ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಡಿಜಿಟಲ್‌ ಕರೆನ್ಸಿಗೆ ಅನುಮತಿ ನೀಡಲಾಗಿದೆ. ಈ ವರ್ಷದಿಂದಲೇ ಡಿಜಿಟಲ್‌ ಕರೆನ್ಸಿ ಚಲಾವಣೆಗೆ ಬರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್‌ ತಿಳಿಸಿದ್ರು. RBIನಿಂದಲೇ ಈ ಡಿಜಿಟಲ್‌ ಕರೆನ್ಸಿ ಆರಂಭವಾಗುತ್ತದೆ. 2022ದೇಸದಲ್ಲಿ ಚಲಾವಣೆಗೆ ಬರುವಂತೆ ಡಿಜಿಟಲ್‌ ಕರೆನ್ಸಿ (ರುಪೀ) ಆರ್‌ಬಿಐ ಬಿಡುಗಡೆ ಮಾಡಲಿದೆ.

ಈಗ ಚಲಾವಣೆಯಲ್ಲಿರುವ ಕರೆನ್ಸಿ ರೂಪಾಯಿಗೆ ಪರ್ಯಾಯವಾಗಿ ಬಳಸಬಹುದಾದ ವರ್ಚುವಲ್‌ ಕರೆನ್ಸಿಯೇ ಡಿಜಿಟಲ್‌ ಕರೆನ್ಸಿ. ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯನ್ನು (ಸಿಬಿಡಿಸಿ) ಚಲಾವಣೆಗೆ ತರಲು ಆರ್‌ಬಿಐ ಸಜ್ಜಾಗುತ್ತಿದೆ.ಈ ವರ್ಚುಯಲ್‌ ಡಿಜಿಟಲ್‌ ಕರೆನ್ಸಿ ಮೇಲೆ ಶೇಕಡಾ. 30 ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

ಇದರಿಂದ ಕಾಗದದ ನೋಟುಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಹಣಕಾಸು ವರ್ಗಾವಣೆ ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ಸುಗಮವಾಗಲಿದೆ. ಜತೆಗೆ ಖಾಸಗಿ ಕ್ರಿಪ್ಟೊ ಕರೆನ್ಸಿಗಳಿಗೆ ಪರ್ಯಾಯವಾಗಿ ಡಿಜಿಟಲ್‌ ಕರೆನ್ಸಿಯನ್ನು ಚಲಾವಣೆಗೊಳಿಸಬಹುದು.

Share Post