CrimeNational

ಗಾಜಿಯಾಬಾದ್‌ನಲ್ಲಿ ದೃಶ್ಯ ಸಿನಿಮಾ ನೆನಪಿಸುವ ಕೊಲೆ; ಬಯಲಾಗಿದ್ದು ಹೇಗೆ..?

ಗಾಜಿಯಾಬಾದ್‌; ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ, ಮನೆಯಲ್ಲೇ ಹೂತು ಹಾಕಿದ್ದ ಮಹಿಳೆ, ನಾಲ್ಕು ವರ್ಷದಿಂದ ಬೇರೊಬ್ಬನ ಮೇಲೆ ಗೂಬೆ ಕೂರಿಸುತ್ತಿದ್ದ ವಿಚಾರ ಬಯಲಾಗಿದೆ. ಪಕ್ಕ ಮನೆಯ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಮಹಿಳೆ ಕೊನೆಗೂ ಅಂದರ್‌ ಆಗಿದ್ದಾಳೆ. ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ನಾಲ್ಕು ವರ್ಷಗಳ ಹಿಂದೆ ಬಂಧಿತ ಮಹಿಳೆ ಹಾಗೂ ಆಕೆಯ ಪ್ರಿಯಕರ ಸೇರಿ ಗಂಡನನ್ನು ಕೊಲೆ ಮಾಡಿದ್ದರು. ಅನಂತರ ಮನೆಯಲ್ಲೇ ಆರು ಅಡಿ ಗುಂಡಿ ತೋಡಿ ಹೂತು ಹಾಕಿದ್ದರು. ಅನಂತರ ಗಂಡ ನಾಪತ್ತೆಯಾಗಿದ್ದಾನೆಂದು ಮಹಿಳೆ ದೂರು ದಾಖಲಿಸಿದ್ದರು. ತನ್ನ ಸೋದರ ಮಾನವೇ ಕೊಲೆ ಮಾಡಿರಬಹುದು, ಕಿಡ್ನ್ಯಾಪ್‌ ಮಾಡಿರಬಹುದು ಎಂದು ಮಹಿಳೆ ಶಂಕಿಸಿದ್ದಳು. ಆದ್ರೆ ಪೊಲೀಸರು ಆಕೆಯ ಸೋದರ ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ತಪ್ಪಿಲ್ಲ ಎಂದು ಖಾತ್ರಿಯಾಗಿತ್ತು. ಅನಂತರ ಪೊಲೀಸರು ಎಷ್ಟೇ ತನಿಖೆ ನಡೆಸಿದರೂ ನಾಪತ್ತೆಯಾಗಿರುವಾತನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಕೇಸ್‌ ಕ್ಲೋಜ್‌ ಮಾಡಿದ್ದರು.

ಆದ್ರೆ ನಾಲ್ಕು ವರ್ಷಗಳ ನಂತರ ವಿಚಾರ ಬಯಲಾಗಿದೆ. ಮಹಿಳೆಯೇ ಗಂಡನನ್ನು ಕೊಲೆ ಮಾಡಿ ನಾಟಕ ಮಾಡ್ತಿರೋದು ಖಾತ್ರಿಯಾಗಿದೆ. ಇದೀಗ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಬಂಧಿತರಿಂದ ಕೊಲೆಗೆ ಬಳಸಿದ್ದ ಪಿಸ್ತೂಲ್‌ ಹಾಗೂ ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.

 

Share Post