EconomyNational

ಬಿಹಾರ, ಉತ್ತರ ಪ್ರದೇಶ ಅತ್ಯಂತ ಬಡ ರಾಜ್ಯಗಳು; ಕರ್ನಾಟಕಕ್ಕೆ 19ನೇ ಸ್ಥಾನ..!

ನವದೆಹಲಿ: ನೀತಿ ಆಯೋಗ ಬಿಡುಗಡೆ ಮಾಡಿರುವ ಬಹು ಆಯಾಮದ ಬಡತನ ಸೂಚ್ಯಂಕದ ಪ್ರಕಾರ, ಬಿಹಾರ, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶಗಳು ದೇಶ ಅತ್ಯಂತ ಬಡ ರಾಜ್ಯಗಳಾಗಿದೆ. ಈ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ 19ನೇ ಸ್ಥಾನ ಸಿಕ್ಕಿದೆ.

ನೀತಿ ಆಯೋಗದ ಸೂಚ್ಯಂಕದ ಪ್ರಕಾರ, ಬಿಹಾರದ 51.91 ರಷ್ಟು ಜನ ಕಡು ಬಡವರಾಗಿದ್ದಾರೆ. ಜಾರ್ಖಂಡ್‌ ರಾಜ್ಯದಲ್ಲಿ ಶೇಕಡಾ  42.16 ರಷ್ಟು ಹಾಗೂ ಉತ್ತರ ಪ್ರದೇಶದಲ್ಲಿ ಶೇಕಡಾ 37.79 ಜನರು ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲಿ ಶೇಕಡಾ 36.65 ಜನ ಬಡವರಿದ್ದರೆ,  ಮೇಘಾಲಯದಲ್ಲಿ ಶೇಕಡಾ 32.67ರಷ್ಟು ಜನ ಬಡತನದಲ್ಲಿ ಬೇಯುತ್ತಿದ್ದಾರೆ.

ನೀತಿ ಆಯೋಗ ನೀಡಿರುವ ಸೂಚ್ಯಂಕದ ಪ್ರಕಾರ ಕೇರಳ ಶೇ.o.71, ಗೋವಾ ಶೇಕಡಾ 3.76, ಸಿಕ್ಕಿ ಶೇಕಡಾ 3.82 ಹಾಗೂ ತಮಿಳುನಾಡು ಶೇಕಡಾ 4.89ರಷ್ಟು ಬಡತನದ ಸೂಚ್ಯಂಕವನ್ನು ಹೊಂದಿದ್ದು, ಈ ರಾಜ್ಯಗಳಲ್ಲಿ ಬಡತನದ ಸಂಖ್ಯೆ ತುಂಬಾನೇ ಕಡಿಮೆ ಇದೆ. ಇನ್ನು ಬಡತನದ ಸೂಚ್ಯಂಕದಲ್ಲಿ ಕರ್ನಾಟಕ 19 ನೇ ಸ್ಥಾನದಲ್ಲಿದೆ.

Share Post