National

ರೈಲು ಹಳಿ ಸ್ಫೋಟಿಸಲು ಪಾಕಿಸ್ತಾನ ಸಂಚು; ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ;  ಭಾರತದ ಪಂಜಾಬ್ ಹಾಗೂ ಸುತ್ತಮುತ್ತಲಿನ ವಿಶೇಷವಾಗಿ ಸರಕು ಸಾಗಣೆ ರೈಲುಗಳ ಹಳಿಗಳನ್ನು ಧ್ವಂಸಗೊಳಿಸಲು ಪಾಕಿಸ್ತಾನದ ಐಎಸ್‌ಐ ಪ್ರಯತ್ನಿಸುತ್ತಿದೆ ಎಂದು ಭಾರತದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಪಂಜಾಬ್ ಹಾಗೂ ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ರೈಲ್ವೇ ಹಳಿಯನ್ನು ಗುರಿಯಾಗಿಸಿಕೊಂಡಿರುವ ಐಎಸ್‌ಐ, ದೊಡ್ಡ ಸಂಚು ರೂಪಿಸಿದೆ.  ರೈಲ್ವೇ ಹಳಿಗಳನ್ನು ಸ್ಫೋಟಿಸಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಐಎಸ್‌ಐ ಭಾರತದಲ್ಲಿ ತನ್ನ ಕಾರ್ಯಕರ್ತರಿಗೆ ಭಾರೀ ಪ್ರಮಾಣದ ಹಣ ನೀಡುತ್ತಿದೆ. ಭಾರತದಲ್ಲಿರುವ ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳಿಗೆ ಭಯೋತ್ಪಾದನಾ ಚಟುವಟಿಕೆ ನಡೆಸಲು ಭಾರೀ ಮೊತ್ತದ ಹಣ ನೀಡಲಾಗುತ್ತಿದೆ ಎಂದಿದೆ.

Share Post