Bengaluru

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್..?ಕಂದಾಯ ಸಚಿವ ಸುಳಿವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ೩ನೇ ಅಲೆ ಅಬ್ಬರ ಶುರುವಾಗಿದೆ. ಈಗಾಗಲೇ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಏರುತ್ತಲೇ ಇದೆ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್‌ ನೀಡಿದೆ. ಬೆಂಗಳೂರನ್ನು ರೆಡ್‌ ಝೋನ್‌ ಎಂದು ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಕಠಿಣ ನಿಯಮಾವಳಿಗಳು ವಿಧಿಸದೇ ಬೇರೆ ದಾರಿಯಿಲ್ಲ ಅಂತಿದಾರೆ ಕಂದಾಯ ಸಚಿವ ಆರ್.ಅಶೋಕ್.‌

ಈಗಾಗಲೇ ನೈಟ್‌ ಕರ್ಪ್ಯೂ ವಿಧಿಸಲಾಗಿದ್ದು ಅದು ಮುಗಿಯವ ಮುನ್ನವೇ ತಜ್ಞರೊಂದಿಗೆ ಮತ್ತೊಂದು ಸಭೆ ಕರೆಯುತ್ತೇವೆ. ಸಿಎಂ ಬೊಮ್ಮಾಯಿಯವರ ನೇತೃತ್ವದಲ್ಲಿ ಸಭೆ ಕರೆದು ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಚರ್ಚೆ ಮಾಡುವುದಾಗಿ ಅಶೋಕ್‌ ತಿಳಿಸಿದ್ರು. ಕೇಂದ್ರ ಸರ್ಕಾರದ ಘೋಷಣೆಯಿಂದಾಗಿ ರಾಜ್ಯದಲ್ಲಿ ನಾವು ಎಚ್ಚರಿಕೆಯಿಂದ ರಬೇಕಾದ ಅವಶ್ಯಕವಾದಲ್ಲಿ ಕಠಿಣ ಕ್ರಮಗಳ ಜಾರೊ ಕೂಡ ಸಾಧ್ಯವಾಗಬಹುದು ಎಂದಿದ್ದಾರೆ. ಸಭೆಯಲ್ಲಿ ತಜ್ಞರು ನೀಡುವ ಸೂಚನೆಗಳನ್ನು ನಾವಯ ಯಾವುದೇ ಬದಲಾವಣೆಯಿಲ್ಲದೆ ಜಾರಿಗೆ ತರುತ್ತೇವೆ. ಕೊರೊನಾ ನಿಯಮಾವಳಿಗಳನ್ನು ಜನತೆ ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲವಾದಲ್ಲಿ ಲಾಕ್‌ಡೌನ್‌ ಮಾಡದೇ ಬೇರೆ ದಾರಿಯಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ರು.

ಕೊರೊನಾ ನಿಯಂತ್ರಣಕ್ಕೆ ಹೇರುವ ಸೂಚನೆಗಳನ್ನು ಜನ ಪಾಲಿಸದಿದ್ರೆ ನಮ್ಮ ತೀರ್ಮಾನಗಳು ಕೂಡ ಅಷ್ಟೇ ಕಠಿಣವಾಗಿರುವತ್ತೇವೆ. ಈ ಬಾರಿ ನಾವು ಎಲ್ಲದಕ್ಕೂ ಸಿದ್ದವಾಗಿಯೇ ಇದ್ದೇವೆ. ಜನರ ಆರೋಗ್ಯ ನಮ್ಮ ಧ್ಯೇಯ ಅದಕ್ಕೆ ಯಾರೇ ಉಲ್ಲಂಘಿಸಿದ್ರು ಕ್ರಮ ತೆಗೆದುಕೊಳ್ಳುತ್ತೇವೆ. ನಮಗೆ ಉತ್ಸವ, ಜಾತ್ರೆ, ಮುಖ್ಯವಲ್ಲ ಜನರ ಆರೋಗ್ಯ ಕಾಳಜಿ ಮುಖ್ಯ ಸಭೆಗೆ ಇನ್ನು ದಿನಾಂಕ ನಿಗದಿ ಮಾಡಿಲ್ಲ ಈ ನೈಟ್‌ ಕರ್ಪ್ಯೂ ಮುಗಿಯುವದರೊಳಗೆ ಸಬೆ ಕರೆಯುವುದಾಗಿ ಕಂದಾಯ ಸಚಿವ ಆರ್.ಅಶೋಕ್‌ ತಿಳಿಸಿದ್ರು.

Share Post