BengaluruCrime

ಕೋಲಾರದಿಂದ ನಾಪತ್ತೆಯಾಗಿದ್ದ ಟೊಮ್ಯಾಟೋ ಲಾರಿ ಗುಜರಾತ್‌ನಲ್ಲಿ ಪತ್ತೆ

ಕೋಲಾರ; ಟೊಮ್ಯಾಟೋ ಬೆಲೆ ಜಾಸ್ತಿಯಾಗಿದ್ದರಿಂದ ಅದನ್ನು ಕಳ್ಳತನ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಟೊಮ್ಯಾಟೋ ತುಂಬಿದ್ದ ವಾಹನವನ್ನು ಹೈಜಾಕ್‌ ಮಾಡಿ ಕೋಲಾರದಲ್ಲಿ ಟೊಮ್ಯಾಟೋ ಮಾರಾಟ ಮಾಡಲಾಗಿತ್ತು. ಇದೀಗ ಕೋಲಾರದಿಂದ ಒಂದು ಲಾರಿ ಟೊಮ್ಯಾಟೋ ನಾಪತ್ತೆಯಾಗಿದೆ. ಇದೀಗ ಆ ಲಾರಿ ಗುಜರಾತಿನಲ್ಲಿ ಪತ್ತೆಯಾಗಿದೆ.

ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಲಾರಿ ಹೋಗಬೇಕಿತ್ತು. ಅದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತ್ತೆಯಾಗಿದೆ. ಲಾರಿ ಚಾಲಕ ಅದರಲ್ಲಿ ಟೊಮ್ಯಾಟೋವನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ನಾಪತ್ತೆಯಾಗಿದ್ದಾನೆ. ಅಂದಹಾಗೆ ಲಾರಿಯಲ್ಲಿ ಜಿಪಿಎಸ್‌ ಇತ್ತು. ಇದರಿಂದ ಮಾಲೀಕರಿಗೆ ಗೊತ್ತಾಗುತ್ತೆ ಎಂಬ ಕಾರಣಕ್ಕೆ ಆಗ ಜಿಪಿಎಸ್‌ ಕಿತ್ತೆಸೆದಿದ್ದ ಎಂದು ತಿಳಿದುಬಂದಿದೆ.

ಲಾರಿ ಚಾಲಕ ಅನ್ವರ್‌ ಎಂದು ತಿಳಿದುಬಂದಿದೆ. ಮೆಹತ್‌ ಟ್ರಾನ್ಸ್‌ಪೋರ್ಟ್‌ ಮಾಲೀಕ ಸಾಧಿಕ್‌ ರಾತ್ರಿಯೇ ಅಹಮದಾಬಾದ್‌ ತೆರಳಿದ್ದಾರೆ. ಅಹಮದಾಬಾದ್‌ ಪೊಲೀಸ್‌ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಲಾರಿಯಲ್ಲಿ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ಇತ್ತು ಎಂದು ತಿಳಿದುಬಂದಿದೆ.

 

Share Post