National

ಮುಚ್ಚಿಂತಲ್‌ನ ಸಮತಾಮೂರ್ತಿಯ ವಿಗ್ರಹ ಲೋಕಾರ್ಪಣೆ ಮಾಡಿದ ಪ್ರಧಾನಿ

ಹೈದರಾಬಾದ್:‌ ಹೈದರಾಬಾದ್‌ನ ಹೊರವಲಯದಲ್ಲಿರುವ ಮುಚ್ಚಿಂತಲ್ ಗ್ರಾಮದಲ್ಲಿ ನಿರ್ಮಾಣವಾಗಿರುವ  216 ಅಡಿ ಎತ್ತರದ ರಾಮಾನುಜಾಚಾರ್ಯರ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿಯವರಯ ಲೋಕಾರ್ಪಣೆಗೊಳಿಸಿದ್ದಾರೆ. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್‌ ಸ್ವಾಮೀಜಿ, ಮೈ ಹೋಂ ಗ್ರೂಪ್‌ ಚೇರ್ಮನ್‌ ಜೆ.ರಾಮೇಶ್‌ ರಾವ್‌, ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌, ಪಾಲ್ಗೊಂಡಿದ್ರು.

ಸುಮಾರು 216ಅಡಿ ಎತ್ತರವುಳ್ಳ ಈ ರಮಾನುಜಚಾರ್ಯರ ಪ್ರತಿಮೆ ಹಲವು ವಿಶೇಷತೆಗಳನ್ನು ಹೊಂದಿದೆ. ಕೂತಿರುವ ಭಂಗಿಯಲ್ಲಿ ಸ್ಥಾಪಿಸಲಾದ ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆ ಎಂದೇ ಖ್ಯಾತಿ ಪಡೆದಿದೆ. ಥಾಯ್ಲೆಂಡ್‌ನಲ್ಲಿರುವ ಬುದ್ಧನ ಪ್ರತಿಮೆ ಮೊದಲ ಸ್ಥಾನದಲ್ಲಿದ್ರೆ ರಮಾನುಜಚಾರ್ಯರ ಈ ಪ್ರತಿಮೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.  ‘ಪಂಚಲೋಹ’ಗಳಿಂದ ಈ ವಿಗ್ರಹವನ್ನು ತಯಾರು ಮಾಡಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವುಗಳ ಮಿಶ್ರಣದಿಂದ 216ಅಡಿ ಎತ್ತರದ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ.

45 ಎಕರೆ ವಿಸ್ತಾರವಾದ ಆವರಣದಲ್ಲಿ ಸ್ಥಾಪಿಸಲಾದ ಈ ವಿಗ್ರಹ 108 ವೈಷ್ಣವ ದಿವ್ಯ ಕ್ಷೇತ್ರಗಳ ಪ್ರತಿಕೃತಿಗಳು ರಚನೆಯಾಗಲಿವೆ. ಇದಲ್ಲದೇ ತಿರುಗುವ ರಾಮಾನುಜಾಚಾರ್ಯರ ಮೂರ್ತಿ ಹಾಗೂ ಬಣ್ಣದ ಕಾರಂಜಿ, ಆಚಾರ‍್ಯರ ಜನ್ಮದ 120 ವರ್ಷಗಳನ್ನು ಸೂಚಿಸುವ 120 ಕಿಲೋ ತೂಕದ ʻಚಿನ್ನದ ಪ್ರತಿಮೆʼಯನ್ನು ಗರ್ಭ ಗುಡಿಯಲ್ಲಿ ಸ್ಥಾಪಿಸಲಾಗಿದೆ.  ಇದಕ್ಕಾಗಿ ದೇಶ ಮತ್ತು ವಿದೇಶಗಳಿಂದ ಸುಮಾರು 1000 ಕೋಟಿ ರೂಪಾಯಿಗಳ ದೇಣಿಗೆಯೊಂದಿಗೆ ಈ ಆಧ್ಯಾತ್ಮಿಕ ಉದ್ಯಾನವನ್ನು ಸ್ಥಾಪಿಸಲಾಗಿದೆ.

 

 

Share Post