BengaluruEconomy

ಬೇಸಿಗೆಯಲ್ಲಿ ವಿದ್ಯುತ್‌ ಬಿಲ್‌ ಜಾಸ್ತಿ ಬರ್ತಿದೆಯಾ..?; ಹಾಗಾದ್ರೆ ಈ ಕೆಲಸ ಮಾಡಿ..

ಬೇಸಿಗೆ ಶುರುವಾಗಿ ಈಗಾಗಲೇ ಬಹಳ ದಿನ ಆಗಿದೆ… ಬಿಸಿಲ ಧಗೆಗೆ ಮನೆಯಲ್ಲಿ ಕೂಡಾ ಇರೋದಕ್ಕೆ ಆಗುತ್ತಿಲ್ಲ.. ಮಾರ್ಚ್ ತಿಂಗಳಿನಿಂದಲೇ ಬಿಸಿಲಿನ ತೀವ್ರತೆ ಶುರುವಾಗಿದೆ.. ಈಗ ಏಪ್ರಿಲ್‌ ಶುರುವಾಗಿದೆ.. ಈಗಿನ್ನೂ ಬಿಸಿಲ ಧಗೆ ಜಾಸ್ತಿಯಾಗಿದೆ.. ಈ ಹಿನ್ನೆಲೆಯಲ್ಲಿ ಜನರು ಸಾಧ್ಯವಾದಷ್ಟು ಮನೆಯೊಳಗೇ ಇರುವಂತೆ ಹವಾಮಾನ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ..  ಮನೆಯಲ್ಲಿಯೇ ಇರುವುದರಿಂದ ನಾವು ವಿದ್ಯುತ್ ಬಳಕೆಯನ್ನು ಹೆಚ್ಚು ಮಾಡುತ್ತೇವೆ.. ಇದರಿಂದಾಗಿ ವಿದ್ಯುತ್‌ ಬಿಲ್‌ ಜಾಸ್ತಿ ಬರಲಿದೆ.. ಆದ್ರೆ ನಾವು ಹೇಳುವ ಸಲಹೆಗಳನ್ನು ಅನುಸರಿಸಿದರೆ, ವಿದ್ಯುತ್‌ ಬಿಲ್‌ ಹೆಚ್ಚು ಬರದಂತೆ ನೋಡಿಕೊಳ್ಳಬಹುದು..

ಇದನ್ನೂ ಓದಿ; ಲಕ್ಸುರಿ ಹೋಟೆಲ್‌ನಲ್ಲಿ ವಾಸ್ತವ್ಯ, ನಕಲಿ ಪೇಮೆಂಟ್‌; ಸಿಕ್ಕಿಬಿದ್ದ ಹೈಟೆಕ್‌ ವಂಚಕ

೧. ಟಿವಿ ಮತ್ತು ಸೆಟ್ ಟಾಪ್ ಬಾಕ್ಸ್ ನಂತಹ ಉಪಕರಣಗಳ ಸ್ವಿಚ್ ಅನ್ನು ಬಳಸಿದ ನಂತರ ಆಫ್ ಮಾಡಬೇಕು. ಮುಖ್ಯ ಸ್ವಿಚ್‌ ಆಫ್‌ ಮಾಡದೇ ಇದ್ದರೆ ಈ ಸಾಧನಗಳು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿದ್ದು, ವಿದ್ಯುತ್‌ ಶಕ್ತಿ ಹೆಚ್ಚು ಖರ್ಚು ಮಾಡುತ್ತವೆ.

೨. ಎಕ್ಸ್‌ಟೆನ್ಷನ್‌ ಉಪಯೋಗಿಸಿ. ಆಗ ಎಲ್ಲಾ ಉಪಕರಣಗಳಿಗೂ ಒಂದೇ ಸ್ವಿಚ್‌ ಇರುತ್ತದೆ.. ಏಕಕಾಲದಲ್ಲಿ ಎಲ್ಲವನ್ನೂ ಆಫ್‌ ಮಾಡಲು ಸುಲಭವಾಗುತ್ತದೆ..  ವೈಯಕ್ತಿಕ ಕಂಪ್ಯೂಟರ್, ಟಿವಿ, ಸೆಟ್-ಟಾಪ್ ಬಾಕ್ಸ್ ಅನ್ನು ಎಕ್ಸ್‌ಟೆನ್ಷನ್‌ನಲ್ಲಿ ಪ್ಲಗ್‌ ಮಾಡಬಹುದು.

ಇದನ್ನೂ ಓದಿ; ಸಾವು ಗೆದ್ದು ಬಂದ ಸಾತ್ವಿಕ್; ಬೋರ್ ವೆಲ್ ನಿಂದ ಹೊರಬಂದ ಬಾಲಕ

೩. ನಿಮ್ಮ AC ಅನ್ನು 24-26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ರನ್ ಮಾಡಬೇಕು.. ಪ್ರತಿ ಡಿಗ್ರಿ ತಾಪಮಾನ ಕಡಿಮೆಯಾದಾಗಲೂ ಅದು ನಿಮ್ಮ ವಿದ್ಯುತ್ ಬಿಲ್ ಹೆಚ್ಚಳವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ನೆನಪಿಡಿ. ಇದಲ್ಲದೇ ಎಸಿಯಲ್ಲಿ ಟೈಮರ್ ಅಳವಡಿಸುವುದು ಸೂಕ್ತ. ಹೀಗೆ ಮಾಡುವುದರಿಂದ ಕೊಠಡಿಯ ತಾಪಮಾನ ಕಡಿಮೆಯಾಗುವುದರ ಜೊತೆಗೆ ವಿದ್ಯುತ್ ಬಿಲ್ ಕೂಡ ಕಡಿಮೆಯಾಗುತ್ತದೆ.

೪. ಹಳೆಯ ಟ್ಯೂಬ್ ಲೈಟ್ ಮತ್ತು ಬಲ್ಬ್‌ಗಳ ಬದಲಿಗೆ ಎಲ್‌ಇಡಿ ಬಲ್ಬ್‌ಗಳನ್ನು ಉಪಯೋಗಿಸಿ. 10-ವ್ಯಾಟ್ ಫಿಲಮೆಂಟ್ ಬಲ್ಬ್ 10 ಗಂಟೆಗಳಲ್ಲಿ 1 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ. ಆದರೆ ಎಲ್ ಇಡಿ ಬಲ್ಬ್ 11 ಗಂಟೆಗಳಲ್ಲಿ ಕೇವಲ 1 ಯೂನಿಟ್ ವಿದ್ಯುತ್ ಬಳಸುತ್ತದೆ.

೫. ಕೊಳಕು ಟ್ಯೂಬ್ ಲೈಟ್‌ಗಳು ಮತ್ತು ಬಲ್ಬ್‌ಗಳು ಬೆಳಕನ್ನು ಶೇಕಡಾ 50 ರಷ್ಟು ಕಡಿಮೆ ಮಾಡುತ್ತದೆ. ನಿಮ್ಮ ಟ್ಯೂಬ್ ಲೈಟ್ ಮತ್ತು ದೀಪಗಳನ್ನು ಆಗಾಗ ಸ್ವಚ್ಛ ಮಾಡುತ್ತಿರಿ, ಅದರ ಮೇಲೆ ಧೂಳು ಕೂತಿದ್ದರೆ ಅದನ್ನು ತೆಗೆಯಿರಿ.

ಇದನ್ನೂ ಓದಿ; ಕಾಂಗ್ರೆಸ್‌ ಮಾಜಿ ಶಾಸಕ ಆತ್ಮಹತ್ಯೆ; ಆಸ್ಪತ್ರೆಯಲ್ಲಿ ತಂದೆಯ ನರಳಾಟ!

೬. ಅನೇಕ ಸ್ವಯಂಚಾಲಿತ ಸಾಧನಗಳು ಬೆಳಕಿನಲ್ಲಿ ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತದೆ. ಅತಿಗೆಂಪು ಸಂವೇದಕಗಳು, ಚಲನೆಯ ಸಂವೇದಕಗಳು, ಸ್ವಯಂಚಾಲಿತ ಟೈಮರ್‌ಗಳು, ಡಿಮ್ಮರ್‌ಗಳು, ಸೌರಶಕ್ತಿ ಸಾಧನಗಳನ್ನು ಸಾಧ್ಯವಿರುವಲ್ಲೆಲ್ಲಾ ಬಳಸಿ ನೋಡಿ.

೭. ನಿಮ್ಮ ಮನೆಯಲ್ಲಿರುವ ರೆಫ್ರಿಜರೇಟರ್ ಅನ್ನು ಸೂರ್ಯನ ಬೆಳಕು, ರೇಡಿಯೇಟರ್, ಓವನ್, ಅಡುಗೆ ಸಲಕರಣೆಗಳಂತಹ ಯಾವುದೇ ಶಾಖದ ಮೂಲಗಳಿಂದ ದೂರವಿಡಲು ಮರೆಯದಿರಿ.

ಈ ಸಲಹೆಗಳೊಂದಿಗೆ ಅಡುಗೆಮನೆಯಲ್ಲಿ ವಿದ್ಯುತ್ ಉಳಿಸಿ. ಅಲ್ಲದೆ, ಅಡುಗೆ ಮನೆಯಲ್ಲಿ ಇಂಧನ ಉಳಿತಾಯದ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಸಾಕಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ; ಮದುವೆ ವರನ ಕಾರಿಗೆ ಚಿಪ್ಸ್‌ ಪಾಕೆಟ್‌ಗಳ ಸಿಂಗಾರ; ಏನಿದು ವಿಚಿತ್ರ..?

Share Post