EconomyLifestyle

ಸಂಪತ್ತಿನಲ್ಲಿ 5 ವಿಧ; ಉದ್ಯೋಗ ಈ 3 ಸಂಪತ್ತು ಕಸಿದುಕೊಳುತ್ತೆ ಹುಷಾರ್‌!

ಬೆಂಗಳೂರು; ಸಂಪತ್ತುಗಳಲ್ಲಿ ಐದು ರೀತಿಯ ಸಂಪತ್ತುಗಳಿವೆ. ನಾವು ಮಾಡುವ ಕೆಲಸಗಳು ಹೇಗಿವೆ ಎಂದರೆ ಐದು ಬಗೆಯ ಸಂಪತ್ತುಗಳಲ್ಲಿ ಎರಡನ್ನು ಮಾತ್ರ ಆಕರ್ಷಿಸುತ್ತವೆ. ಉಳಿದ ಮೂರು ಸಂಪತ್ತುಗಳನ್ನು ಅವು ಕಸಿದುಕೊಳ್ಳುತ್ತವೆ. ಹೀಗಾಗಿ, ನಾವು ಮಾಡುವ ಉದ್ಯೋಗದ ಬಗ್ಗೆ ನಾವು ಎಚ್ಚರ ವಹಿಸದೇ ಹೋದರೆ, ನಾವು ಅನುಭವಿಸಬೇಕಾದ ಮೂರು ಸಂಪತ್ತುಗಳು ನಮಗೆ ಇಲ್ಲದಂತಾಗಿಬಿಡುತ್ತವೆ.

ಆ ಐದು ಸಂಪತ್ತುಗಳು ಯಾವುವು ನೋಡೋಣ;

  1. ಆರ್ಥಿಕ ಸಂಪತ್ತು (ಹಣ ಮತ್ತು ಆಸ್ತಿ)
  2. ಸಾಮಾಜಿಕ ಸಂಪತ್ತು ( ಸ್ಟೇಟಸ್‌ ಮತ್ತು ಜನಪ್ರಿಯತೆ)
  3. ಸಮಯದ ಸಂಪತ್ತು
  4. ದೈಹಿಕ ಸಂಪತ್ತು (ಆರೋಗ್ಯ ಮತ್ತು ಚೈತನ್ಯ)
  5. ಆಧ್ಯಾತ್ಮಿಕ ಸಂಪತ್ತು (ಮಾನಸಿಕ ಶಾಂತಿ, ಆತ್ಮಗೌರವ)

ಒಮ್ಮೆ ಯೋಚನೆ ಮಾಡಿ ನೋಡಿ ನೀವು ಮಾಡುವ ಯಾವುದೇ ಕೆಲಸದಿಂದ ಆರ್ಥಿಕ ಸಂಪತ್ತು ವೃದ್ಧಿಯಾಗುತ್ತದೆ. ಇದರಿಂದಾಗಿ ನಮಗೆ ಹಣ ಹಾಗೂ ಆಸ್ತಿ ಗಳಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ಮಾಡುವ ಉದ್ಯೋಗದಿಂದ ಸಮಾಜದಲ್ಲಿ ನಮಗೊಂದು ಸ್ಟೇಟಸ್‌ ಸಿಗುತ್ತೆ. ಜೊತೆಗೆ ಒಂದಷ್ಟು ಜನರು ನಮ್ಮನ್ನು ಇಷ್ಟಪಡುತ್ತಾರೆ. ಅಂದರೆ ಕೊಂಚ ಜನಪ್ರಿಯತೆ ಸಿಗುತ್ತದೆ. ಇದರಿಂದಾಗಿ ಈ ಎರಡು ಸಂಪತ್ತುಗಳ ಅಮಲಿನಲ್ಲಿ ನಾವು ಮುಳುಗಿಹೋಗುತ್ತೇವೆ. ಆಗ ನಾವು ಸಮಯದ ಸಂಪತ್ತು ಮರೆತುಬಿಡುತ್ತೇವೆ. ಯಾವಾಗಲೂ ಕೆಲಸದ ಬ್ಯುಸಿಯಲ್ಲಿ ಕುಟುಂಬ, ಸ್ನೇಹಿತರು, ಬಂಧುಗಳು ಎಲ್ಲರನ್ನೂ ಮರೆಯುತ್ತೇವೆ. ಈ ಮೂಲಕ ಅವರೊಂದಿಗೆ ಕಳೆದಾಗ ಸಿಗುವ ಆನಂದದ ಸಮಯದ ಸಂಪತ್ತನ್ನು ನಾವು ಕಳೆದುಕೊಂಡಿರುತ್ತೇವೆ.

ಇನ್ನು ದೈಹಿಕ ಸಂಪತ್ತು. ಕೆಲಸದ ಬ್ಯುಸಿಯಲ್ಲಿ ನಾವು ದೇಹದ ಆರೋಗ್ಯ ಹಾಗೂ ಫಿಟ್‌ನೆಸ್‌ ಬಗ್ಗೆ ಗಮನ ಕೊಡೋದಿಲ್ಲ. ಆರೋಗ್ಯ ಹಾಗೂ ದೇಹದ ಫಿಟ್‌ನೆಸ್‌ ಕೂಡಾ ಮನುಷ್ಯನಿಗೆ ಒಂದು ಸಂಪತ್ತು. ಹಣ, ಐಶ್ವರ್ಯ ಎಲ್ಲಾ ಇದ್ದು, ಆರೋಗ್ಯ ಸರಿಯಿಲ್ಲ ಎಂದರೆ ಏನು ಪ್ರಯೋಜನ ಅಲ್ಲವೇ. ಹೀಗಾಗಿ ಹಣ, ಆಸ್ತಿ, ಸ್ಟೇಟಸ್‌ ಹಿಂದೆ ಬಿದ್ದ ನಾವು ದೈಹಿಕ ಸಂಪತ್ತು ಮರೆತೇಬಿಡುತ್ತೇವೆ.

ಇನ್ನು ಸಮಾಜದಲ್ಲಿ ಒಂದು ಸ್ಟೇಟಸ್‌, ಹಣ, ಆಸ್ತಿ ಎಲ್ಲಾ ಇದ್ದರೂ ಮಾನಸಿಕ ಶಾಂತಿ, ಆತ್ಮಗೌರವ ಇಲ್ಲದಿದ್ದರೆ ಹೇಗೆ ಅಲ್ಲವೇ. ಆದ್ರೆ ಆರ್ಥಿಕ ಸಂಪತ್ತು ಹಾಗೂ ಸಾಮಾಜಿಕ ಸಂಪತ್ತು ಗಳಿಸೋದಕ್ಕಾಗಿ ನಾವು ಕೆಲಸದಲ್ಲಿ ಭಾರಿ ಬ್ಯುಸಿಯಾಗಿಬಿಡುತ್ತೇವೆ. ಇದರಿಂದಾಗಿ ನಮಗೆ ಆಧ್ಯಾತ್ಮಿಕ ಸಂಪತ್ತು ಕೊರತೆಯಾಗುತ್ತದೆ. ಆಗ ಎಲ್ಲವೂ ಇದ್ದು, ಮನಃಶಾಂತಿ, ಆತ್ಮಗೌರವ ಕಡಿಮೆಯಾಗಿಬಿಡುತ್ತೆ. ಹೀಗೆ, ನಾವು ಮಾಡುವ ಉದ್ಯೋಗ ಎರಡು ಸಂಪತ್ತುಗಳಿಗಾಗಿ ಮಾತ್ರ ಆಕರ್ಷಿತವಾಗುತ್ತದೆ. ಉಳಿದ ಮೂರು ಸಂಪತ್ತುಗಳನ್ನು ಕಸಿದುಕೊಳ್ಳುತ್ತದೆ. ಹೀಗಾಗಿ ಸ್ವಲ್ಪ ಎಚ್ಚರಿಕೆ ಇದ್ದರೆ ಮಾತ್ರ ಎಲ್ಲಾ ಐದೂ ಸಂಪತ್ತುಗಳನ್ನು ಅನುಭವಿಸೋದಕ್ಕೆ ಸಾಧ್ಯ.

 

Share Post