ಸ್ಮೃತಿ ಇರಾನಿ ಪುತ್ರಿಯ ನಿಶ್ಚಿತಾರ್ಥ
ನವದೆಹಲಿ: ಮೋದಿ ಸರ್ಕಾರದಲ್ಲಿ ಪ್ರಭಾವಿ ಸಚಿವೆಯಾಗಿರುವ ಸ್ಮೃತಿ ಇರಾನಿಯವರ ಪುತ್ರಿ ಶಾಲೆನ್ ಅವರ ನಿಶ್ಚತಾರ್ಥ ನೆರವೇರಿದೆ. ಅರ್ಜುನ್ ಭಲ್ಲಾ ಎಂಬುವವರೊಂದಿಗೆ ಶಾಲೆನ್ ಉಂಗುರ ಬದಲಿಸಿದ್ದಾರೆ. ಈ ವಿಚಾರವನ್ನು ಸ್ವತಃ ಸ್ಮೃತಿ ಇರಾನಿಯವರೇ ತಿಳಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಚಿವೆ ಸ್ಮೃತಿ ಇರಾನಿ, ತಮ್ಮ ಮಗಳ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಶಾಲೆನ್‌ಗೆ ಅರ್ಜುನ್ ಉಂಗುರು ತೊಡಿಸುತ್ತಿರುವ ಫೋಟೋವನ್ನು ಸ್ಮೃತಿ ಇರಾನಿ ಹಂಚಿಕೊಂಡಿದ್ದಾರೆ.ಈ ಪೋಸ್ಟ್‌ನಲ್ಲಿ ಅರ್ಜುನ್ ಭಲ್ಲಾ ನಮ್ಮ ಹೃದಯ ಗೆದ್ದ ವ್ಯಕ್ತಿ ಎಂದು ಸ್ಮೃತಿ ಬರೆದುಕೊಂಡಿದ್ದಾರೆ.