CrimeInternational

ಇಸ್ರೇಲ್‌ನಲ್ಲಿ ಭಾರತೀಯ ಯುವಕನ ಕಗ್ಗೊಲೆ

ಜೆರುಸಲೇಂ; ಭಾರತೀಯ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಸ್ರೇಲ್‌ನಲ್ಲಿ ನಡೆದಿದೆ. ಗುರುವಾರ ರಾತ್ರಿ ಜೆರುಸಲೇಂನ ಕಿರ್ಯಾತ್ ಶ್ಮೋನಾ ಪ್ರದೇಶದಲ್ಲಿ ಪಾರ್ಟಿಯೊಂದರಲ್ಲಿ ಜಗಳ ನಡೆದಿದೆ. ಈ ವೇಳೆ ದುಷ್ಕರ್ಮಿಗಳು ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

   18 ವರ್ಷದ ಯೆಯೋಲ್ ಲೆಹಿಂಗಾಹೆಲ್ ಎಂಬಾತನೇ ಕೊಲೆಯಾದ ಯುವಕ. ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯ ನಂತರ ನೋಫ್ ಹಗಾಲಿಲ್‌ನಲ್ಲಿರುವ ಮನೆಗೆ ಮರಳಬೇಕಿತ್ತು. ಆದರೆ, ಜಗಳದ ಮಧ್ಯೆ ಸಿಕ್ಕಿಹಾಕಿಕೊಂಡ ಆತ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Share Post