CrimeDistricts

ಅರಿಶಿನಗುಂಡಿ ಫಾಲ್ಸ್‌ ಒಳಗೆ ಜಾರಿಬಿದ್ದ ಯುವಕ; ಕೊಚ್ಚಿಹೋದ ವ್ಯಕ್ತಿ..!

ಉಡುಪಿ; ಕರಾವಳಿಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ಫಾಲ್ಸ್‌ ಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ಅದೇ ರೀತಿ ಕೊಲ್ಲೂರು ಬಳಿಯ ಅರಿಶಿನಗುಂಡಿ ಫಾಲ್ಸ್‌ ಕೂಡಾ ಭೋರ್ಗರೆಯುತ್ತಿದೆ. ಇದನ್ನು ನೋಡುತ್ತಾ ನಿಂತಿದ್ದ ಯುವಕನೊಬ್ಬ ಜಾರಿಬಿದ್ದಿದ್ದು, ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಯುವಕ ಜಲಪಾತ ವೀಕ್ಷಣೆಗೆ ಬಂದಿದ್ದ. ಒಂದು ಕಲ್ಲಿನ ಮೇಲೆ ನಿಂತು ಜಲಪಾತ ವೀಕ್ಷಿಸುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಕಾಲು ಜಾರಿದೆ. ಇದ್ರಿಂದ ಆತ ಕ್ಷಣಾರ್ಧದಲ್ಲಿ ನೀರಿಗೆ ಬಿದ್ದಿದ್ದಾರೆ. ಭೋರ್ಗರೆದು ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಆತನಿಗಾಗಿ ಕುಡುಕಾಟ ನಡೆಯುತ್ತಿದೆ.

Share Post