Bengaluru

ಅನಾಥ ದೇವರ ಪೋಟೊಗಳಿಗೆ ಮುಕ್ತಿ: ಎಲ್ಲೆಂದರಲ್ಲಿ ಬಿಸಾಡದೆ ಹೀಗೆ ಮಾಡಿ

ಬೆಂಗಳೂರು: ಮನೆಗಳಲ್ಲಿ ಪೂಜಿಸಿದ ದೇವರ ಪೋಟೊಗಳು ಒಡೆದರೆ, ಹಳೆಯದಾಗಿದ್ದರೆ ಅದನ್ನ ಮರದಡಿಯಲ್ಲೋ, ರಸ್ತೆ ಬದಿಯಲ್ಲೋ ಬಿಸಾಡುವುದು ಸಾಮಾನ್ಯ, ಹೀಗೆ ಬಿಸಾಡಿದ ದೇವರ ಪೋಟೊಗಳಿಗೆ ಮುಕ್ತಿ ನೀಡುವ ಕಾರ್ಯಕ್ಕೆ ಬೆಂಗಳೂರಿನ ರಾಮಕೃಷ್ಣ ಆಶ್ರಮದ ಸೇವಾ ಟ್ರಸ್ಟ್ ಮುಂದಾಗಿದೆ.

ಬೆಂಗಳೂರಿನ ಗಿರಿನಗರದಲ್ಲಿರುವ ರಾಮಕೃಷ್ಣ ಆಶ್ರಮದ ಆವರಣದಲ್ಲಿ ಚಕ್ರವರ್ತಿ ಸೂಲಿ ಬೆಲೆ ನೇತೃತ್ವದಲ್ಲಿ ಅನಾಥ ದೇವರ ಪೋಟೊಗಳಿಗೆ ಮುಕ್ತಿ ನೀಡುವ ಕಾರ್ಯ ಮಾಡಲಾಗ್ತಿದೆ. ನೂರಾರು ಯುವಕರು ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ಸುಮಾರು 10 ಸಾವಿರ ಕ್ಕೂ ಅಧಿಕ ರಾಶಿ ರಾಶಿ ಅನಾಥ ದೇವರ ಪೋಟೊಗಳ ಸಂಗ್ರಹಣೆ ಮಾಡಿಕೊಂಡು ಬಂದಿರುವ ಯುವಕರು ಮಠದ ಆವರಣದಲ್ಲಿ ಪೋಟೊಗಳಲ್ಲಿ ಗ್ಲಾಸ್, ಪ್ಲೇವುಡ್, ರಟ್ಟು, ಹಾಗೂ ಫ್ರೇಂ ಗಳನ್ನ ಬೇರೆ ಬೇರೆ ಮಾಡಿ ದೇವರ ಭಾವ ಚಿತ್ರಕ್ಕೆ ಮುಕ್ತಿ ನೀಡುವ ಕೆಲಸದಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಟ್ವಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ, ಕಣ ಕಣದಲ್ಲೂ ಶಿವ ಎಂಬ ಚಿಂತನೆಯಡಿಯಲ್ಲಿ ಈ ಕಾರ್ಯವನ್ನ ಮಾಡಲಾಗ್ತಿದೆ. ಒಬ್ಬ ಯುವಕ ನನ್ನ ಬಳಿ ಬಂದು ಕ್ರಿಶ್ಚಿಯನ್ ಫಾದ್ರಿಗಳು ಹೇಳ್ತಾರೆ ಅವರ ದೇವರುಗಳಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಶಕ್ತಿಯಿಲ್ಲ ಎನ್ನುತ್ತಾರೆ ಎಂದಿದ್ದ ಅಂದೇ ಈ ಕೆಲಸ ಮಾಡಲು ನಿರ್ಧಾರ ಮಾಡಿದ್ದೆ. ಅಂದಿನಿಂದ ಅನಾಥ ದೇವರ ಪೋಟೊ ಸಂಗ್ರಹಿಸಿ ಅದರಲ್ಲಿರುವ ಗಾಜು, ರಟ್ಟು, ಪ್ಲೇವುಡ್, ಮರದ ಫ್ರೇಂ ಗಳನ್ನ ಡಿಸ್ ಮ್ಯಾಟಲ್ ಮಾಡಿ ಉಳಿದಂತೆ ದೇವರ ಭಾವಚಿತ್ರಗಳನ್ನ ಗುಂಡಿ ತೆಗೆದು ಅದರಲ್ಲಿ ಹಾಕಿ ಮುಚ್ಚಿ ಅದರ ಮೇಲೊಂದು ಗಿಡ ನೆಟ್ಟು ಪೋಶಿಸಲಾಗುತ್ತದೆ. ಇದರಿಂದ ಗಿಡದ ಮೂಲಕ ಕಣ ಕಣದಲ್ಲೂ ಶಿವ ನೆಲೆಸಿರುತ್ತಾನೆ ಎಂದರು.

ಅಷ್ಟೇ ಅಲ್ಲದೇ ಈ ಕೆಲಸ ನೀವು ನಿಮ್ಮ ಮನೆಗಳಲ್ಲಿ ಮಾಡುವ ಮೂಲಕ ಪರಿಸರ ರಕ್ಷಣೆ ಮಾಡುವಂತೆ ಕರೆ ನೀಡಿದ್ದಾರೆ. ದೇವರ ಪೋಟೊದಲ್ಲಿರುವ ಚಿತ್ರವನ್ನ ತೆಗೆದು ಒಂದು ಕುಂಡದಲ್ಲಿ ಹಾಕಿ ಅದರಲ್ಲಿ ಗಿಡ ನೆಟ್ಟು ಬೆಳೆಸುವಂತೆ ಮನವಿ ಮಾಡಿದ್ದಾರೆ.

Share Post