Districts

ಆರ್‌ಎಸ್‌ಎಸ್‌, ಬಿಜೆಪಿಯವರೇ ದೇಶಕ್ಕೆ ನಿಮ್ಮ ಕೊಡುಗೆ ಏನು..?; ಉಗ್ರಪ್ಪ ಸವಾಲು

ಚಿಕ್ಕಬಳ್ಳಾಪುರ; ಆರ್‌ಎಸ್‌ಎಸ್‌, ಬಿಜೆಪಿಯವರೇ ಈ ದೇಶಕ್ಕೆ ನಿಮ್ಮ ಕೊಡುಗೆ ಏನು? ಎಂದು  ವಿಧಾನಪರಿಷತ್ ಸದಸ್ಯ ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ. ಚಿಕ್ಕ ಬಳ್ಳಾಪುರದಲ್ಲಿ ಮಾತನಾಡಿದ ಅವರು, ನಿಮ್ಮ ಕೊಡುಗೆ ಏನು, ಕಾಂಗ್ರೆಸ್‍ನವರ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚಿಸಲು ನಾವು ಸಿದ್ದ. ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯವರಿಗೆ ಈ ದೇಶದ ಪರಂಪರೆ ಸ್ವಾತಂತ್ರದ ಆಶಯಗಳು ಗೊತ್ತಿಲ್ಲ. ಸಮಾಜ, ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆ ಬಿಜೆಪಿಯದ್ದು. ಹೀಗಾಗಿ ನಿಮ್ಮ ಹಳೆಯ ಯೂನಿಫಾರಂ ಚಡ್ಡಿಯನ್ನು ಸಾಂಕೇತಿಕವಾಗಿ ಸುಟ್ಟರೇ ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್‌ ಬಿಜೆಪಿಯವರೇ ಈ ದೇಶಕ್ಕೆ ನಿಮ್ಮ ಕೊಡುಗೆ ಏನು? ಕಾಂಗ್ರೆಸ್‍ನವರ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ದರಾಗಿದ್ದೇವೆ. ನೀವು ಚರ್ಚೆ ನಡೆಸಲು ತಯಾರಿದ್ದರೆ ಬನ್ನಿ ವಿಧಾನಸೌಧದ ಮುಂದೆ ಡೇಟ್ ಟೈಂ ಫಿಕ್ಸ್ ಮಾಡಿ. ಅದನ್ನು ಬಿಟ್ಟು ಹುಳುಕುಗಳನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ತೆಗೆಯಬೇಡಿ. ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರವೃತ್ತಿ ಮುಂದುವರೆಸಬೇಡಿ ಎಂದಿದ್ದಾರೆ.

Share Post