CinemaDistricts

ಹುಟ್ಟೂರಿನಲ್ಲಿ ನಟ ಯಶ್‌ ಕುಟುಂಬ; ನಂಜುಂಡೇಶ್ವರನ ದರ್ಶನ ಪಡೆದ ರಾಕಿಂಗ್‌ ಸ್ಟಾರ್‌

ಮೈಸೂರು; ರಾಕಿಂಗ್‌ ಸ್ಟಾರ್‌ ಯಶ್‌ ಅವರು ಕುಟುಂಬ ಸಮೇತ ಕಳೆದ ಮೂರು ದಿನಗಳಿಂದ ಮೈಸೂರು ಪ್ರವಾಸದಲ್ಲಿದ್ದಾರೆ. ಇಂದು ಯಶ್‌ ಕುಟುಂಬ ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದಿದೆ. ಪತ್ನಿ ರಾಧಿಕಾ ಪಂಡಿತ್‌ ಹಾಗೂ ಮಕ್ಕಳ ಜೊತೆ ನಂಜನಗೂಡು ದೇಗುಲಕ್ಕೆ ಹೋಗಿದ್ದ ಯಶ್‌ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಯಶ್‌ ಜೊತೆ ಅವರ ಅತ್ತೆ, ಮಾವ ಕೂಡಾ ದೇಗುಲಕ್ಕೆ ಭೇಟಿ ನೀಡಿದ್ದರು. ಸಿನಿಮಾ ಶೂಟಿಂಗ್‌ ಮಧ್ಯೆ ಬಿಡುವು ಮಾಡಿಕೊಂಡು ಯಶ್‌ ಫ್ಯಾಮಿಲಿ ಟೈಮ್‌ ಕೊಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಯಶ್‌ ಕುಟುಂಬ ನಾಗರಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡಿ ಬಂದಿದ್ದಾರೆ. ಯಶ್‌ ಅವರ ಹುಟ್ಟೂರು ಮೈಸೂರೇ ಆಗಿದ್ದು, ಈ ಬಾರಿ ಅವರು ಮಕ್ಕಳಿಗೆ ತಮ್ಮ ಹುಟ್ಟೂರನ್ನು ತೋರಿಸಿದ್ದಾರೆ.

Share Post