ಕರ್ನಾಟಕ ಬಂದ್ ಕೈ ಬಿಡಿ – ಬಸವರಾಜ್ ಬೊಮ್ಮಾಯಿ
ಹುಬ್ಬಳ್ಳಿ : ಜನರು ತೀವ್ರ ಸಂಕಷ್ಟ ಎದುರಿಸುತ್ತಿರೋ ಸಲುವಾಗಿ ಶುಕ್ರವಾರದ ಬಂದ್ ಅನ್ನು ಕೈ ಬಿಡಬೇಕು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, MES ಕಾರ್ಯಕರ್ತರ ವಿರುದ್ಧ ಈಗಾಗಲೇ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಈಗ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ದಯಮಾಡಿ ಬಂದ್ ನಿರ್ಧಾರವನ್ನು ಕೈ ಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಜನರು ಈಗಾಗಲೇ ಕೊರೊನಾದಿಂದ ತತ್ತರಿಸಿ ಹೋಗಿದ್ದಾರೆ. ಈ ಸಮಯದಲ್ಲಿ ಬಂದ್ ಬೇಡ. ಬಲವಂತದ ಬಂದ್ಗೆ ಮುಂದಾದರೆ ಅಲ್ಲಿಯೇ ಉತ್ತರ ನೀಡಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.