DistrictsPolitics

ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಿದ ಸಿದ್ದರಾಮಯ್ಯ

ಮೈಸೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದ ತಮ್ಮ ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಮತದಾನ ಮಾಡಿದರು. ಅವರು ಪ್ರತಿ ಸಲ ಸ್ವಗ್ರಾಮಕ್ಕೆ ಬಂದಾಗಲೂ ಸ್ನೇಹಿತ ಕೆಂಪೀರಯ್ಯ ಅವರ ಮನೆಗೆ ಬರುತ್ತಾರೆ. ಈ ಬಾರಿಯೂ ಕೆಂಪೀರಯ್ಯ ಅವರು ಮನೆಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಲ್ಲಿಂದ ಅವರು ಕರ್ನಾಟಕ ಪಬ್ಲಿಕ್‌ ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಮಗ ಯತೀಂದ್ರ ಸಿದ್ದರಾಮಯ್ಯ, ಸೊಸೆ ಸ್ಮಿತಾ ರಾಕೇಶ್‌ ಕೂಡಾ ಇದೇ ವೇಳೆ ಮತ ಚಲಾವಣೆ ಮಾಡಿದರು.

 

Share Post