CrimeDistricts

ಎಂಇಎಸ್‌ ಮಹಾಮೇಳಾವ್‌ಗೆ ಬ್ರೇಕ್‌; ಜಾಗ ಖಾಲಿ ಮಾಡಿದ ಎಂಎಎಸ್‌

ಬೆಳಗಾವಿ; ಎಂಇಎಸ್‌ ಮಹಾಮೇಳಾವ್‌ ಗೆ ಬ್ರೇಕ್‌ ಬಿದ್ದಿದೆ. ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಬೆಳಗಾವಿಯ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಆಯೋಜಿಸಲು ಮುಂದಾಗಿದ್ದ ಎಂಇಎಸ್‌ ಮಹಾಮೇಳಾವ್ ವೇದಿಕೆ ತೆರವುಗೊಳಿಸಲಾಯಿತು. ಎಂಇಎಸ್‌ ಮುಖಂಡರು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.

ಇಲ್ಲಿನ ವ್ಯಾಕ್ಸಿನ್‌ ಡಿಪೋದಲ್ಲಿ ಶಾಮಿಯಾನ ಹಾಗೂ ವೇದಿಕೆ ಹಾಕಲಾಗಿತ್ತು. ಬೆಳಗಾವಿ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್‌ ಮೇಳಾವ್‌ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೆ ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಜೊತೆಗೆ ಮೇಳಾವ್‌ ಆಯೋಜಿಸಲಾಗಿದ್ದ ಸ್ಥಳದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಾಗಿ ಆಯೋಜಕರು, ಶಾಮಿಯಾನ ತೆರವು ಮಾಡಿ ಜಾಗ ಖಾಲಿ ಮಾಡಿದ್ದಾರೆ.

Share Post