DistrictsPolitics

ನಾಮಪತ್ರ ವಾಪಸ್‌ ಪಡೆಯಲು ಆಮಿಷ ಒಡ್ಡಿದರಾ ವಿ.ಸೋಮಣ್ಣ; ಆಡಿಯೋದಲ್ಲೇನಿದೆ..?

ಚಾಮರಾಜನಗರ; ಸಚಿವ ವಿ.ಸೋಮಣ್ಣ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಎರಡೂ ಕ್ಷೇತ್ರಗಳಿಗೆ ಅವರಿಗೆ ಹೊಸದಾಗಿರುವುದರಿಂದ ಎರಡೂ ಕೂಡಾ ಅವರಿಗೆ ಸವಾಲೇ. ಹೀಗಾಗಿ, ವಿ.ಸೋಮಣ್ಣ ಅವರು ಸವಾಲಾಗೇ ತೆಗೆದುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ನಾಮಪತ್ರ ವಾಪಸ್‌ ಪಡೆಯಲು ಸೋಮಣ್ಣ ಆಮಿಷವೊಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆಡಿಯೋ ಒಂದು ವೈರಲ್‌ ಆಗಿದೆ.

ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಗೆ ವಿ.ಸೋಮಣ್ಣ ಅವರೇ ಕರೆ ಮಾಡಿ ನಾಮಪತ್ರ ವಾಪಸ್‌ ಪಡೆಯುವಂತೆ ಆಮಿಷ ಒಡ್ಡಿದ್ದಾರಂತೆ. ಅದರ ಆಡಿಯೋ ತುಣುಕು ಈ ಎಲ್ಲೆಡೆ ವೈರಲ್‌ ಆಗುತ್ತಿದೆ.

ಆಡಿಯೋದಲ್ಲಿ ಏನಿದೆ..?
==============
ಸೋಮಣ್ಣ: ನೀನು ನನಗೆ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ ಮಗನ ಮಾತು ಕೇಳಕ್ಕೆ ಹೋಗಬೇಡ. ನಿನಗೆ ಬದುಕೋದಕ್ಕೆ ಏನು ಬೇಕೋ ಎಲ್ಲವೂ ಮಾಡ್ತೀನಿ. ಅಣ್ಣ ಇದ್ದಾರೆ. ಮೊದ್ಲು ವಾಪಸ್ ತಗೋ. ಆಮೇಲೆ ಬಾಕಿದ್ ಮಾತಾಡ್ತೀನಿ. ನನ್ನ ಮಾತು ಕೇಳು. ನಿನ್ನ ಹಿತ ಕಾಪಾಡೋದು ನನ್ನ ಜವಾಬ್ದಾರಿ, ಸುದೀಪಣ್ಣನ ಜವಾಬ್ದಾರಿ. ಮಲ್ಲು, ಮರಮ್‌ಕಲ್, ನಾನು, ಸುದೀಪಣ್ಣ ಮೂರು ಜನ ಇರ್ತೀವಿ. ಉಪ್ಪಾರರ ದೇವಸ್ಥಾನದಲ್ಲಿ ಇದ್ದೇನೆ. ಮೊದಲು ಆ ಕೆಲಸ ಮಾಡು. ನಿನಗೆ ಕೈ ಮುಗಿತೀನಿ.

ಜೆಡಿಎಸ್ ಅಭ್ಯರ್ಥಿ: ಇಲ್ಲ, ನಾನು ಯಾರ ಮಾತು ಕೇಳ್ಕೊಂಡು ನಿಂತಿಲ್ಲ. ವಾಪಸ್ ತೆಗೆಯೋದಕ್ಕೆ ಆಗಲ್ಲಣ್ಣ. ನಿಮ್ಮ ಜೊತೆಗೇ ಇರ್ತೀನಿ. ನೀವು ಹೇಳಿದಂಗೆ ಇರ್ತೀನಿ ಬಿಡಣ್ಣ, ಮುಂದೆ ನೀವೇ ಮುಖ್ಯಮಂತ್ರಿ ಆಗಬೇಕು ಎಂದು ನಾನೂ ಬಯಸ್ತೀನಿ.

ಸೋಮಣ್ಣ: ಯಾವನೋ ಪೋಲಿ ನನ್ ಮಗನ ಮಾತು ಕೋಳ್ಕೊಂಡು, ಮೊದಲು ವಾಪಸ್ ತಗೋ, ಮಲ್ಲು… ಸರ್ಕಾರ ಬರ್ತದೆ. ಗೂಟದ ಕಾರು ಮಾಡಿ ಕೊಡ್ತೀವಿ. ಮೊದ್ಲು ತಗೊ, ದೇವರ ಮುಂದೆ ನಿಂತಿದ್ದೀವಿ. ಯಾರನ್ನೂ ಕೇಳೊಕ್ಕೆ ಹೋಗ್ಬೇಡ. ನಾವೆಲ್ಲ ಮಾತಾಡುತ್ತೀವಿ. ಮೊದ್ಲು ವಾಪಸ್ ತಗೊ. ಈಗ ಟೈಮಿಲ್ಲ.

ಸೋಮಣ್ಣ ಮಾತನಾಡಿದ್ದಾರೆಂಬ ಈ ರೀತಿಯ ಆಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

 

Share Post