DistrictsHealth

ಶಂಕಿತ ಚಿಕನ್‌ ಪಾಕ್ಸ್‌ಗೆ ಇಬ್ಬರು ಮಕ್ಕಳು ಬಲಿ: ರಕ್ತದ ಮಾದರಿ ರವಾನೆ

ಚಿತ್ತಾಪುರ: ಶಂಕಿತ ಚಿಕನ್‌ ಪಾಕ್ಸ್‌ಗೆ ಇಬ್ಬರು ಮಕ್ಕಳು ಬಲಿಯಾಗಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸ್ಟೇಷನ್‌ ನಾಳವಾರ್‌ ಗ್ರಾಮದಲ್ಲಿ ನಡೆದಿದೆ. ಮೃತ ಬಾಕರ ಮನೆಯವರಿಗೂ ಈಗ ಚಿಕನ್‌ ಪಾಕ್ಸ್‌ ಕಾಣಿಸಿಕೊಂಡಿದ್ದ ಆತಂಕ ಮನೆ ಮಾಡಿದೆ.

ಇಮ್ರಾನ್ (8), ರೆಹಮಾನ್( 15) ಮೃತ ಬಾಲಕರು. ಇಮ್ರಾನ್‌ ಜನವರಿ 17 ರಂದು ಮನೆಯಲ್ಲಿ ಸಾವನನ್ನಪ್ಪಿದ್ದಾನೆ.  ರೆಹಮಾನ್ ಜನವರಿ 30 ರಂದು ಸೊಲ್ಲಾಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.  ಈಗ ಮೃತ ಮಕ್ಕಳ ತಾಯಿ, ಸಹೋದರ ಮತ್ತು ಸಹೋದರಿಗೂ ಚಿಕನ್ ಪಾಕ್ಸ್ ಬಂದಿದ್ದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಫೀಜಾ (13), ಅರ್ಮಾನ್ (6) ಮತ್ತು ಹಫೀಜಾ ಬೇಗಂ (33)ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಆರೋಗ್ಯ ಇಲಾಖೆಯ ಮಕ್ಕಳ ಸಾವಿನ ಬಗ್ಗೆ ತನಿಖೆ ಪ್ರಾರಂಭ ಮಾಡಿದ್ದು, ಮಕ್ಕಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿರುವ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್​ ವೈರಾಲಜಿಗೆ  ರಕ್ತದ ಮಾದರಿಯನ್ನು ರವಾನೆ ಮಾಡಿದ್ದಾರೆ. ಮಕ್ಕಳ ಸಾವಿಗೆ ಚಿಕಿನ್ ಪಾಕ್ಸ್ ಕಾರಣನಾ? ಅಥವಾ ದಡಾರನಾ ಅನ್ನೋದು ಪರೀಕ್ಷೆಯಲ್ಲಿ ಬಯಲಾಗಲಿದೆ. ಈಗ ಸ್ಟೇಷನ್ ನಾಲವಾರ್ ದಲ್ಲಿ ಮತ್ತಿಬ್ಬರು ಮಕ್ಕಳಿಗೆ ಚಿಕನ್ ಪಾಕ್ಸ್ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Share Post