ಅಕ್ಟೋಬರ್ 13ರಿಂದ ದರ್ಶನ ನೀಡಲಿರುವ ಹಾಸನಾಂಬೆ
ಹಾಸನ; ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಈ ವರ್ಷ ದರ್ಶನ ನೀಡುವ ಸಮಯ ಹತ್ತಿರ ಬಂದಿದೆ. ಅಕ್ಟೋಬರ್ 13 ರಂದು ಹಾಸನಾಂಬೆ ದೇಗುಲವನ್ನು ತೆರೆಯಲಾಗುತ್ತದೆ. ಅಕ್ಟೋಬರ್ 27ರವರೆಗೆ ಹಾಸನಾಂಬೆ ದರ್ಶನ ನೀಡಲಿದ್ದಾರೆ.
ದೇಗುಲದ ಅರ್ಚಕರು ಇಂದು ತಹಶೀಲ್ದಾರ್ ನಟೇಶ್ ಸಮ್ಮುಖದಲ್ಲಿ ಹಾಸನಾಂಬೆಯ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ದೇಗುಲಕ್ಕೆ ತಂದಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ದೇವಿಯ ಒಡವೆಗಳನ್ನು ಬೆಳ್ಳಿ ರಥದಲ್ಲಿ ದೇವಸ್ಥಾನಕ್ಕೆ ತರಲಾಯಿತು.
ಕುದುರು ಗಂಡಿಯರುವ ಕ್ರಿ.ಶ.114 ವೀರಗಲ್ಲಿನ ಶಾಸನದ ಪ್ರಕಾರ ಪಾಳೆಗಾರ ಕೃಷ್ಣಪ್ಪನಾಯಕ ಕಾರ್ಯನಿಮಿತ್ತ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದಿತ್ತಂತೆ. ಆಗ ಅಬರು ಅಪಶಕುನವೆಂದು ಭಾವಿಸುತ್ತಾರೆ. ಆಗ ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿ ಈ ಸ್ಥಳದಲ್ಲಿ ದೇಗುಲ ಕಟ್ಟು ಎಂದು ಹೇಳುತ್ತಾಳಂತೆ. ಹೀಗಾಗಿ ಇಲ್ಲಿ ಹಾಸನಾಂಬೆ ದೇವಸ್ಥಾನ ಕಟ್ಟಲಾಗಿದೆ.