ಎರಡೂವರೆ ವರ್ಷದಲ್ಲಿ 439 ಉಗ್ರರ ಹತ್ಯೆ; ರಾಜ್ಯಸಭೆಗೆ ಗೃಹಸಚಿವಾಲಯ ಮಾಹಿತಿ
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹಾಗೂ ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ರಾಜ್ಯಸಭೆಗೆ ಅಧಿಕೃತ ಮಾಹಿತಿ ನೀಡಿದೆ. 2019ರ ಆಗಸ್ಟ್‌ನಿಂದೀಚೆಗೆ 439 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ದಾಖಲೆ ಮೂಲಕ ಮಾಹಿತಿ ನೀಡಿದೆ.
ಗೃಹ ಸಚಿವಾಲಯದ ದಾಖಲೆಯಲ್ಲೇನಿದೆ..?
೧. 2019ರ ಆಗಸ್ಟ್‌ನಿಂದ ಜನವರಿ 26ರವರೆಗೆ ಜಮ್ಮು-ಕಾಶ್ಮೀರದಲ್ಲಿ 541 ಉಗ್ರ ಚಟುವಟಿಕೆಗಳು
೨. ಈ ಅವಧಿಯಲ್ಲಿ 439 ಉಗ್ರರನ್ನು ಹತ್ಯೆ ಮಾಡಲಾಗಿದೆ
೩. ಈ ಕೃತ್ಯಗಳ ವೇಳೆ 98 ಜನ ಸಾಮಾನ್ಯರು ಸಾವನ್ನಪ್ಪಿದ್ದಾರೆ
೪. ಉಗ್ರರೊಂದಿಗೆ ಕಾರ್ಯಾಚರಣೆ ವೇಳೆ 109 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ
೫. ಈ ದಾಳಿಗಳಿಂದ 5.3 ಕೋಟಿ ರೂಪಾಯಿ ಮೊತ್ತದ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ