CrimeDistricts

ಮದುವೆ ಕ್ಯಾನ್ಸಲ್‌; ವಿಧವೆ ಹಾಗೂ ಯೋಧ ಆತ್ಮಹತ್ಯೆ

ಹಾಸನ; ವಿಧವೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಯೋಧ ಮತ್ತೊಬ್ಬಳೊಂದಿಗೆ ಮದುವೆಯಾಗುತ್ತಿದ್ದುದನ್ನು ನೋಡಿ ವಿಧವೆ ಕಲ್ಯಾಣ ಮಂಟಪಕ್ಕೆ ಹೋಗಿ ಮದುವೆ ನಿಲ್ಲಿಸಿದ್ದಳು. ಇದೀಗ ವಿಧವೆ ಹಾಗೂ ಯೋದ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಕಿರಣ್‌ ಹಾಗೂ ಆಶಾ ಆತ್ಮಹತ್ಯೆ ಮಾಡಿಕೊಂಡವರು. ಹೊಂಗೆರೆ ಗ್ರಾಮದ ಬಳಿ ಇಬ್ಬರೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಕಳೆದ ಹತ್ತು ವರ್ಷಗಳಿಂದ ಸೇನೆಯಲ್ಲಿದ್ದ ಕಿರಣ್ ಕುಮಾರ್ ಗೆ ಆಶಾ ಪರಿಚಯವಾಗಿತ್ತು. ಆಶಾಗೆ ಒಬ್ಬ ಮಗ ಹಾಗೂ ಮಗಳಿದ್ದಾಳೆ. ಆದ್ರೆ ಕಿರಣ್‌ ಕುಮಾರ್‌ ನಿನಗೆ ಬಾಳು ಕೊಡುತ್ತೇನೆ ಎಂದು ಹೇಳಿ ಆಕೆಯನ್ನು ಮನೆಯಲ್ಲೇ ಮದುವೆಯಾಗಿದ್ದನಂತೆ. ಆದ್ರೆ ಕಿರಣ್‌ ಈ ವಿಚಾರವನ್ನು ತನ್ನ ಮನೆಯಲ್ಲಿ ತಿಳಿಸಿರಲಿಲ್ಲ.

ಇದೀಗ ಮನೆಯವರ ಒತ್ತಡದಿಂದ ಕಿರಣ್‌ ಬೇರೊಂದು ಮದುವೆಯಾಗುತ್ತಿದ್ದ. ಇದನ್ನು ತಿಳಿದ ವಿಧವೆ ಆಶಾ ಕಲ್ಯಾಣ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ್ದಳು. ಇದಾದ ನಂತರ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

Share Post