ಸಲ್ಮಾನ್ ಖಾನ್ ಪ್ರಾಣ ಕಾಪಾಡುತ್ತಿರುವ ಬ್ರೇಸ್‌ಲೆಟ್!
ಮುಂಬೈ; ಖ್ಯಾತ ಬಾಲಿವುಡ್ ನಾಟ ಸಲ್ಮಾನ್ ಖಾನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.. ಇವರು ಈಗಲೂ ಕೂಡಾ ಹಿಂದಿ ಚಿತ್ರರಂಗದಲ್ಲಿ ಸೂಪರ್ ಸ್ಟಾರ್.. ಸಿನಿಮಾ ಜೊತೆ ಬಿಗ್ ಬಾಸ್ ಶೋಗಳನ್ನು ನಡೆಸಿಕೊಡುತ್ತಾ ಕೋಟ್ಯಂತರ ಜನರ ಹೃದಯ ಗೆದ್ದಿದಾರೆ.. ಆದ್ರೆ ಇವರಿಗೆ ಜೀವ ಬೆದರಿಕೆ ಇದೆ.. ಇತ್ತೀಚೆಗಷ್ಟೇ ಅವರ ಆಪ್ತರಲ್ಲಿ ಒಬ್ಬರಾದ ಬಾಬಾ ಸಿದ್ದಿಕಿ ಕೊಲೆಯಾಯಿತು.. ಅದಾದ ಮೇಲೆ ಸಲ್ಮಾನ್ ಖಾನ್ ಅವರಿಗೆ ಸರ್ಕಾರವೇ ಭದ್ರತೆ ಒದಗಿಸಿದೆ..
ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅಧಿಕೃತವಾಗಿ ಸಿದ್ದಿಕಿ ಬಾಬಾನನ್ನು ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ.. ಇನ್ನು ಇದೇ ಬಿಷ್ಣೊಯ್ ಗ್ಯಾಂಗ್ ಸಲ್ಮಾನ್ ಖಾನ್ ಕೊಲೆ ಯತ್ನಿಸುತ್ತಿದೆ.. ಹಲವು ಬಾರಿ ಅಟ್ಯಾಕ್‌ಗೆ ಪ್ರಯತ್ನಗಳು ನಡೆದಿವೆ ಕೂಡಾ.. ಹೀಗಾಗಿಯೇ
ಸಲ್ಮಾನ್ ಖಾನ್ ಕೈಯಲ್ಲಿ ಯಾವಾಗಲೂ ಒಂದು ಬ್ರಾಸ್‌ಲೆಟ್ ಧರಿಸುತ್ತಾರೆ. ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ಅವರು ಅದನ್ನು ಧರಿಸುತ್ತಾರೆ ಎಂದು ಆಪ್ತರು ಹೇಳುತ್ತಾರೆ. ಈ ಬ್ರೇಸ್ಲೆಟ್ ಧರಿಸುವುದರಿಂದ ನಕಾರಾತ್ಮಕ ಅಂಶಗಳು ದೂರವಾಗುತ್ತವೆ ಎಂದು ಸಲ್ಮಾನ್ ನಂಬಿದ್ದಾರೆ.
ಈ ನೀಲಿ ಬಣ್ಣದ ಕಲ್ಲಿನ ಬಳೆಯನ್ನು ಧರಿಸುವುದರ ಹಿಂದಿನ ರಹಸ್ಯವನ್ನು ಸಲ್ಮಾನ್ ಖಾನ್ ಬಹಿರಂಗಪಡಿಸಿದ್ದಾರೆ.. ‘ನನ್ನ ತಂದೆ ಯಾವಾಗಲೂ ಇದನ್ನು ಧರಿಸುತ್ತಿದ್ದರು. ಅದಕ್ಕೇ ನಾನೂ ಧರಿಸುತ್ತಿದ್ದೇನೆ’ ಎಂದಿದ್ದಾರೆ ಸಲ್ಲು ಭಾಯ್.
ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಬಲಗೈಗೆ ಬ್ರೇಸ್‌ಲೆಟ್ ತೊಟ್ಟಿದ್ದಾರೆ. ಈ ರತ್ನವನ್ನು ಫಿರುಜಾ ಎಂದು ಕರೆಯಲಾಗುತ್ತದೆ. ಇದನ್ನು ಧರಿಸಿದರೆ ಅದೃಷ್ಟ ಮತ್ತು ತೊಂದರೆಗಳು ದೂರವಾಗುತ್ತವೆ ಎಂಬುದು ಸಲ್ಮಾನ್ ನಂಬಿಕೆ.